ADVERTISEMENT

ಕೋಲಾರದ 179 ಶಾಲೆಗೆ ಶೇ 100 ಫಲಿತಾಂಶ

ಗುಣಾತ್ಮಕತೆಯಲ್ಲಿ ಸಾಧನೆ: ಡಿಡಿಪಿಐ ಕೃಷ್ಣಮೂರ್ತಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 12:53 IST
Last Updated 21 ಮೇ 2022, 12:53 IST
ಕೃಷ್ಣಮೂರ್ತಿ
ಕೃಷ್ಣಮೂರ್ತಿ   

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 379 ಪ್ರೌಢ ಶಾಲೆಗಳ ಪೈಕಿ 179 ಶಾಲೆಗಳಿಗೆ ಶೇ 100ರ ಫಲಿತಾಂಶ ಬಂದಿದೆ. ಇದರಲ್ಲಿ 60 ಸರ್ಕಾರಿ ಶಾಲೆಗಳು ಸೇರಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ 21 ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 21 ವಸತಿ ಶಾಲೆಗಳು ಸೇರಿದಂತೆ ಒಟ್ಟು 60 ಸರ್ಕಾರಿ ಪ್ರೌಢ ಶಾಲೆಗಳು, 17 ಅನುದಾನಿತ ಹಾಗೂ 102 ಅನುದಾನರಹಿತ ಶಾಲೆಗಳು ಶೇ 100 ಫಲಿತಾಂಶ ಸಾಧನೆ ಮಾಡಿವೆ. ಗುಣಾತ್ಮಕತೆಯಲ್ಲೂ ಸಾಧನೆಯಾಗಿದೆ’ ಎಂದರು.

‘ಕೋಲಾರ ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢ ಶಾಲೆಗಳು 8, ಸಮಾಜ ಕಲ್ಯಾಣ ಇಲಾಖೆಯ 3 ವಸತಿ ಶಾಲೆಗಳು, 4 ಅನುದಾನಿತ ಶಾಲೆಗಳು, 34 ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು 49 ಶಾಲೆಗಳಿಗೆ ಶೇ 100 ಫಲಿತಾಂಶ ಬಂದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಬಂಗಾರಪೇಟೆ ತಾಲ್ಲೂಕಿನಲ್ಲಿ ಸರ್ಕಾರಿ 6, ಸಮಾಜಕಲ್ಯಾಣ ಇಲಾಖೆಯ 3 ವಸತಿ ಶಾಲೆಗಳು ಹಾಗೂ 17 ಅನುದಾನರಹಿತ ಶಾಲೆ ಸೇರಿದಂತೆ 27 ಶಾಲೆಗಳಿಗೆ ಶೇ 100 ಫಲಿತಾಂಶ ಬಂದಿದೆ. ಕೆಜಿಎಫ್ ತಾಲ್ಲೂಕಿನಲ್ಲಿ ಸರ್ಕಾರಿ 3, ಸಮಾಜಕಲ್ಯಾಣ ಇಲಾಖೆಯ 2, ಅನುದಾನರಹಿತ 8 ಸೇರಿದಂತೆ 13 ಶಾಲೆಗಳಿಗೆ ಶೇ 100 ಫಲಿತಾಂಶ ಬಂದಿದೆ’ ಎಂದು ವಿವರಿಸಿದರು.

‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ 13 ಸರ್ಕಾರಿ, 4 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, 4 ಅನುದಾನಿತ ಹಾಗೂ 17 ಅನುದಾನರಹಿತ ಶಾಲೆಗಳು ಸೇರಿದಂತೆ 38 ಶಾಲೆಗಳಿಗೆ ಶೇ 100 ಫಲಿತಾಂಶ ಬಂದಿದೆ. ಮಾಲೂರು ತಾಲ್ಲೂಕಿನಲ್ಲಿ 13 ಸರ್ಕಾರಿ, 4 ಸಮಾಜ ಕಲ್ಯಾಣ ಇಲಾಖೆ, 4 ಅನುದಾನಿತ, 17 ಅನುದಾನರಹಿತ ಶಾಲೆಗಳು ಸೇರಿದಂತೆ 38 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ’ ಎಂದು ಹೇಳಿದರು.

ವಿಷಯವಾರು ಅಂಕ: ‘ಜಿಲ್ಲೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 2,192 ಮಂದಿ ಶೇ 100ರ ಅಂಕ ಸಾಧನೆ ಮಾಡಿದ್ದು, ಪ್ರಥಮ ಭಾಷೆಯಲ್ಲಿ 299, ದ್ವಿತೀಯ ಭಾಷೆಯಲ್ಲಿ 337, ತೃತೀಯ ಭಾಷೆಯಲ್ಲಿ 567, ಗಣಿತದಲ್ಲಿ 633 ಹಾಗೂ ವಿಜ್ಞಾನದಲ್ಲಿ 397 ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.

‘ವಿಷಯವಾರು ಶೇಕಡ ಫಲಿತಾಂಶ ಗಮನಿಸಿದಾಗ ಪ್ರಥಮ ಭಾಷೆಯಲ್ಲಿ ಶೇ 95.44, ದ್ವಿತೀಯ ಭಾಷೆಯಲ್ಲಿ ಶೇ 99.52, ತೃತೀಯ ಭಾಷೆಯಲ್ಲಿ ಶೇ 97.28, ಗಣಿತದಲ್ಲಿ ಶೇ 97.64, ವಿಜ್ಞಾನದಲ್ಲಿ ಶೇ 97.86 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 97.77 ಫಲಿತಾಂಶ ಸಾಧನೆಯಾಗಿದೆ. ಅನುತ್ತೀರ್ಣರಾಗಿರುವ 1,089 ಮಂದಿಯಲ್ಲಿ 315 ಮಂದಿ ನಿರಂತರ ಗೈರು ಹಾಜರಾದವರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.