ADVERTISEMENT

21 ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 10:05 IST
Last Updated 6 ಸೆಪ್ಟೆಂಬರ್ 2011, 10:05 IST

ಕೋಲಾರ: ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣ ಗಳಿಂದ ತೆರವಾಗಿರುವ 21 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಪ್ರಕ್ರಿಯೆ  ಆರಂಭವಾಗಿದೆ.

ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ವೇಳಾಪಟ್ಟಿ ಅನುಸರಿಸಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಗತ್ಯ ಪೂರ್ವ ಹಾಗೂ ಅಂತಿಮ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ತೆರವಾಗಿರುವ ಗ್ರಾ.ಪಂ. ಸದಸ್ಯ ಸ್ಥಾನಗಳ ತಾಲ್ಲೂಕುವಾರು ಮೀಸಲಾತಿ ವಿವರ ಹೀಗಿದೆ.
ಕೋಲಾರ: ತಾಲ್ಲೂಕಿನಲ್ಲಿ 6 ಸ್ಥಾನಗಳು ಖಾಲಿ ಉಳಿದಿವೆ. ಮುದುವಾಡಿ ಗ್ರಾ.ಪಂ.-ಮುದುವಾಡಿ ಹೊಸಹಳ್ಳಿ (ಸಾಮಾನ್ಯ), ಸೂಲೂರು ಗ್ರಾ.ಪಂ.-ತಲಗುಂದ (ಪರಿಶಿಷ್ಟ ಜಾತಿ), ಮುದುವತ್ತಿ ಗ್ರಾ.ಪಂ.-ಶೆಟ್ಟಿಗಾನಹಳ್ಳಿ (ಸಾಮಾನ್ಯ), ಚೌಡದೇನಹಳ್ಳಿ ಗ್ರಾ.ಪಂ.-ಕಲ್ವ (ಪರಿಶಿಷ್ಟ ಜಾತಿ), ಚೆನ್ನಸಂದ್ರ ಗ್ರಾ.ಪಂ.-ಕಾಮಾಂಡಹಳ್ಳಿ(ಸಾಮಾನ್ಯ), ಉರಿಗಿಲಿ ಗ್ರಾ.ಪಂ. -ಉಪ್ಪುಕುಂಟೆ (ಪರಿಶಿಷ್ಟ ಜಾತಿ)

ಮಾಲೂರು: ತಾಲ್ಲೂಕಿನಲ್ಲಿ 3 ಸ್ಥಾನ ಖಾಲಿ ಉಳಿದಿವೆ. ತೊರ‌್ನಹಳ್ಳಿ ಗ್ರಾ.ಪಂ.-ತೊರ‌್ನಹಳ್ಳಿ-1(ಪರಿಶಿಷ್ಟ ಜಾತಿ),  ನೂಟವೆ ಗ್ರಾ.ಪಂ.-ಕೊಮ್ಮನಹಳ್ಳಿ (ಸಾಮಾನ್ಯ ಮಹಿಳೆ), ನೂಟವೆ ಗ್ರಾ.ಪಂ.-ಚಿಕ್ಕನಾಯಕನಹಳ್ಳಿ (ಪರಿಶಿಷ್ಟ ಜಾತಿ).

ಬಂಗಾರಪೇಟೆ: ತಾಲ್ಲೂಕಿನಲ್ಲಿ 6 ಸ್ಥಾನಗಳು ಖಾಲಿ ಉಳಿದಿವೆ. ಮಾವಹಳ್ಳಿ ಗ್ರಾ.ಪಂ. -ನಾಯಕರಹಳ್ಳಿ (ಹಿಂ.ವರ್ಗ ಬಿ), ಎನ್.ಜಿ.ಹುಲ್ಕೂರು ಗ್ರಾ.ಪಂ. -ಎನ್‌ಜಿಹುಲ್ಕೂರು-1(ಪರಿಶಿಷ್ಟ ಜಾತಿ),  ಬೇತಮಂಗಲ ಗ್ರಾ.ಪಂ.-ಬೇತಮಂಗಲ-2 (ಹಿಂ.ವರ್ಗ-ಬ), ಕಾರಹಳ್ಳಿ ಗ್ರಾ.ಪಂ.-ನೆರ್ನಹಳ್ಳಿ (ಸಾಮಾನ್ಯ), ಪಾರಂಡಹಳ್ಳಿ ಗ್ರಾ.ಪಂ.-ಆಡಂಪಲ್ಲಿ (ಪರಿಶಿಷ್ಟ ಜಾತಿ), ಬಲಮಂದೆ ಗ್ರಾ.ಪಂ.-ದೊಡ್ಡಪನ್ನಾಂಡಹಳ್ಳಿ (ಸಾಮಾನ್ಯ ಮಹಿಳೆ).

ಮುಳಬಾಗಲು: ತಾಲ್ಲೂಕಿನಲ್ಲಿ 4 ಸ್ಥಾನಗಳು ಖಾಲಿ ಉಳಿದಿವೆ. ಕುರುಡಮಲೆ ಗ್ರಾ.ಪಂ. -ಕದರೀಪುರ (ಸಾಮಾನ್ಯ), ಉತ್ತನೂರು ಗ್ರಾ.ಪಂ.-ಉತ್ತನೂರು (ಪರಿಶಿಷ್ಟ ಜಾತಿ ಮಹಿಳೆ), ಮುದಿಗೆರೆ ಮಜರಾ ಗಡ್ಡೂರು ಗ್ರಾ.ಪಂ.-ಮಲ್ಲೆಕುಪ್ಪ (ಪರಿಶಿಷ್ಟ ಪಂಗಡ ಮಹಿಳೆ), ಆಲಂಗೂರು ಗ್ರಾ.ಪಂ. -ಮನ್ನೇನಹಳ್ಳಿ (ಪರಿಶಿಷ್ಟ ಜಾತಿ).
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ 2 ಸ್ಥಾನ ಖಾಲಿ ಉಳಿದಿವೆ. ಅಡ್ಡಗಲ್ಲು ಗ್ರಾ.ಪಂ.-ವೇಂಪಲ್ಲಿ (ಸಾಮಾನ್ಯ), ಗೌನಿಪಲ್ಲಿ ಗ್ರಾ.ಪಂ.-ಗೌನಿಪಲ್ಲಿ-4(ಪರಿಶಿಷ್ಟ ಪಂಗಡ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.