ADVERTISEMENT

ಜೆಇಇ: ವಿದ್ಯಾಜ್ಯೋತಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 13:51 IST
Last Updated 12 ಮಾರ್ಚ್ 2021, 13:51 IST
ಮೊಹಮ್ಮದ್‌ ಮೊಯ್ನ್‌
ಮೊಹಮ್ಮದ್‌ ಮೊಯ್ನ್‌   

ಕೋಲಾರ: ನಗರದ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್‌ ಮೊಯ್ನ್‌ ಶೇ 98.89 ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಜೆಇಇ ಮೇನ್ಸ್‌ ಪರೀಕ್ಷೆಗೆ ಹಾಜರಾಗಿದ್ದ ಕಾಲೇಜಿನ 155 ವಿದ್ಯಾರ್ಥಿಗಳ ಪೈಕಿ 105 ಮಂದಿ ಅರ್ಹತೆ ಪಡೆದಿದ್ದಾರೆ. ಶೇ 90ಕ್ಕೂ ಹೆಚ್ಚು ಅಂಕ ಗಳಿಸಿರುವ 12 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಟಿ.ಆರ್‌.ಶ್ರೀಕಾಂತ್‌ ಶೇ 97.18, ಎಸ್.ಪಿ.ಧನುಷ್‌ ಶೇ 96.28, ರಿಷಿತ್‌ ರೆಡ್ಡಿ ಶೇ 95.13, ಯಶ್ವಂತ್‌ ಎ.ದೊಡ್ಡೇಗೌಡ ಶೇ 94.14, ಎಚ್‌.ಎಂ.ಸಾಗರ್‌ ಶೇ 93.56 ಮತ್ತು ಈ.ಕೆ.ಮಧಮಿತಾ ಶೇ 92ರಷ್ಟು ಅಂಕ ಗಳಿಸಿದ್ದಾರೆ.

ADVERTISEMENT

ಆರ್‌.ನಿಶ್ಚಲ್‌ ಮಯೂರ್‌ ಶೇ 91.84, ಎನ್‌.ಕೆ.ಯಶ್ವಂತ್‌ ರೆಡ್ಡಿ ಶೇ 91.42, ಬಿ.ವಿ.ವರುಣ್‌ ಶೇ 90.63, ಈ.ದೀಪ್ತಿ ಶೇ 90.53 ಹಾಗೂ ಟಿ.ಎಂ.ಭುವನ್‌ ಶೇ 90.07ರಷ್ಟು ಅಂಕ ಪಡೆದಿದ್ದಾರೆ. ನುರಿತ ಉಪನ್ಯಾಸಕರು, ಉತ್ಕೃಷ್ಟ ಅಧ್ಯಯನ ಸಾಮಗ್ರಿ, ಪೂರ್ವ ಯೋಜಿತ ವೇಳಾಪಟ್ಟಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.