ಮುಳಬಾಗಿಲು: ಜಮೀನು ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಇಟ್ಟಿಗೆ ಕಲ್ಲುಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ನಗರದ ಮುತ್ಯಾಲ ಪೇಟೆಯ ಎಸ್.ಎನ್. ಮನು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು , ಜಮೀನು ವಿಚಾರವಾಗಿ ತನ್ನ ಸ್ವಂತ ಅಕ್ಕ ಹಾಗೂ ಭಾವನೇ ಹಲ್ಲೆಕೋರರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗಾಯಾಳು ಮನು ತಿಳಿಸಿದರು.
ನಗರದ ಮುತ್ಯಾಲಪೇಟೆಯ ಗಂಗಾಮಾಂಬ ದೇವಾಲಯದ ಪಕ್ಕದಲ್ಲಿರುವ ಮೋಕ್ಷಿತ ದೀಕ್ಷಿತ ಎಂಬ್ರಾಯಿಡರಿ ವರ್ಕ್ಸ್ ಅಂಗಡಿಯಲ್ಲಿ ತನ್ನ ಸ್ವಂತ ಕೆಲಸದಲ್ಲಿ ಇದ್ದಾಗ ಅಂಗಡಿಗೆ ನುಗ್ಗಿದ ಮೂವರು ವ್ಯಕ್ತಿಗಳು ದಾಳಿ ನಡೆಸಿ ಮುಖ ಹಾಗೂ ಮೂಗನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದು, ಹಲ್ಲೆ ಕೋರರ ಮೇಲೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.