ADVERTISEMENT

ಮುಳಬಾಗಿಲು: ಕೇಂದ್ರ ಕಾಯ್ದೆ ವಿರೋಧಿಸಿ ಅರಿವು ಜಾಥಾ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:04 IST
Last Updated 20 ಜನವರಿ 2021, 3:04 IST
ಮುಳಬಾಗಿಲು ತಾಲ್ಲೂಕಿನ ರೈತರಿಗೆ ಕೃಷಿ ಕಾಯ್ದೆ ಸಾಧಕ ಬಾಧಕಗಳ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಪ್ರವಾಸಿ ಮಂದಿರದ ಬಳಿ ಮಂಗಳವಾರ ಚಾಲನೆ ನೀಡಲಾಯಿತು
ಮುಳಬಾಗಿಲು ತಾಲ್ಲೂಕಿನ ರೈತರಿಗೆ ಕೃಷಿ ಕಾಯ್ದೆ ಸಾಧಕ ಬಾಧಕಗಳ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಪ್ರವಾಸಿ ಮಂದಿರದ ಬಳಿ ಮಂಗಳವಾರ ಚಾಲನೆ ನೀಡಲಾಯಿತು   

ಮುಳಬಾಗಿಲು: ತಾಲ್ಲೂಕಿನ 365 ಗ್ರಾಮಗಳ ರೈತರಿಗೆ ಕೃಷಿ ಕಾಯ್ದೆ ಸಾಧಕ, ಬಾಧಕಗಳ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ನಗರದ ಪ್ರವಾಸಿ ಮಂದಿರದ ಬಳಿ ಮಂಗಳವಾರ ಚಾಲನೆ ನೀಡಲಾಯಿತು.

ಕೇಂದ್ರ ಕೃಷಿ ಕಾಯ್ದೆ ರೈತರ ಪಾಲಿಗೆ ಮುಳ್ಳಾಗಿದ್ದು ಈ ಕುರಿತು ಪ್ರತಿ ಗ್ರಾಮದ ರೈತರಿಗೂ ಅರಿವು ಮೂಡಿಸಲಾಗುವುದು ಎಂದು ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ ಹೇಳಿದರು.

ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಮುಖಂಡ ಮೆಕಾನಿಕ್ ಶ್ರೀನಿವಾಸ್ ಮಾತನಾಡಿ, ಇಷ್ಟೊಂದು ಪ್ರತಿರೋಧದ ನಡುವೆಯು ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಲು ಮುಂದಾಗದಿರುವುದು ವಿಷಾದನೀಯ ಎಂದರು.

ADVERTISEMENT

ಗುಜ್ಜಮಾರಂಡಹಳ್ಳಿ ಜಗದೀಶ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರಿ, ಮುಖಂಡ ಹರೀಶ್, ಅಂಬರೀಶ್, ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಆನಂದ್, ರೈತ ಸಂಘದ ಮುಖಂಡ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.