ಮುಳಬಾಗಿಲು: ಶಬರಿಮೆಲೆಗೆ ತೆರಳಿದ್ದ ಭಕ್ತರ ಬಸ್ ಕೇರಳದ ಕೊಟ್ಟಾಯಂ ಸಮೀಪದಲ್ಲಿ ಬುಧವಾರ ಮುಂಜಾನೆ ಪಲ್ಟಿ ಹೊಡೆದ ಪರಿಣಾಮ 17 ಮಂದಿಗೆ ಗಂಭೀರ ಗಾಯಗಳಾಗಿ, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ತಾಲ್ಲೂಕಿನ ತಮ್ಮರೆಡ್ಡಿ ಹಳ್ಳಿ, ಬಂಗವಾದಿ ಹಾಗೂ ಎಂ.ಕೊತ್ತೂರು ಗ್ರಾಮದವರು ಈಚೆಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ಖಾಸಗಿ ಬಸ್ಸಿನಲ್ಲಿ 50 ಮಂದಿ ಭಕ್ತರು ಶಬರಮಲೆಗೆ ಹೊರಟಿದ್ದರು. ಆ ವೇಳೆ ಬಸ್ಸು ಕೇರಳದ ಪಂಪ ಸಮೀಪದ ಕೊಟ್ಟಾಯಂ ಬಳಿಯ ತಿರುವಿನಲ್ಲಿ ಏಕಾಏಕಿ ಪಲ್ಟಿ ಹೊಡೆದಿದೆ. ಬಸ್ಸಿನಲ್ಲಿದ್ದ 19 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನು ಪಂಪ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದ ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಪಂಪ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರೆ, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಗಾಯಾಳುಗಳನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.