ADVERTISEMENT

ಬ್ಯಾಡ್ಮಿಂಟನ್: ಅಳ್ವಾಸ್ ತಂಡ ಸಾಧನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 15:07 IST
Last Updated 19 ಜನವರಿ 2020, 15:07 IST
ಕೋಲಾರದಲ್ಲಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ನಡೆದ ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಸೀನಿಯರ್ ಲೀಗ್ ಪಂದ್ಯಾವಳಿಯಲ್ಲಿ ಅಳ್ವಾಸ್ ಮಹಿಳೆಯರ ತಂಡ ಚಾಂಪಿಯನ್‌ ಪಡೆದುಕೊಂಡಿವೆ.
ಕೋಲಾರದಲ್ಲಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ನಡೆದ ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಸೀನಿಯರ್ ಲೀಗ್ ಪಂದ್ಯಾವಳಿಯಲ್ಲಿ ಅಳ್ವಾಸ್ ಮಹಿಳೆಯರ ತಂಡ ಚಾಂಪಿಯನ್‌ ಪಡೆದುಕೊಂಡಿವೆ.   

ಕೋಲಾರ: ನಗರದಲ್ಲಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಎರಡು ದಿನ ನಡೆದ ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್ ಸೀನಿಯರ್ ಲೀಗ್ ಪಂದ್ಯಾವಳಿಯಲ್ಲಿ ಅಳ್ವಾಸ್ ಪುರುಷ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್‌ ಪಡೆದುಕೊಂಡಿವೆ.

ಪುರುಷ ವಿಭಾಗದಲ್ಲಿ ಅಳ್ವಾಸ್ ತಂಡ, ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ ತಂಡ (ಎ) ವಿನ್ನರ್, ಪುರುಷ ವಿಭಾಗದಲ್ಲಿ ಬೆಂಗಳೂರಿನ ಕ್ಸಲ್ವಿ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ (ಬಿ) ತಂಡದವರು ರನ್ನರ್ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷ ವಿಭಾಗದಲ್ಲಿ ಬೆಂಗಳೂರಿನ ಕೆನೆರಾ ಬ್ಯಾಂಕಿನ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಬೆಂಗಳೂರು ತಂಡದ ವಿಜಯರ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಅಳ್ವಾಸ್ ತಂಡದ ಜಯಲಕ್ಷ್ಮಿ ಅತ್ಯುತ್ತಮ್ ಅಟಗಾರರ ಪ್ರಶಸ್ತಿಗಳಿಸಿಕೊಂಡಿದ್ದಾರೆ.

ADVERTISEMENT

ಧಿಶಾ ಸಮಿತಿ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ, ಕ್ರೀಡಾಪಟುಗಳಾದ ನವೀನ್ ಕುಮಾರ್, ಪುರುಷೋತ್ತಮ್, ಜಿ.ಬಿ.ನಾಗರಾಜ್, ಶಂಕರ್ ನಾರಾಯಣ, ನಾಗೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.