ADVERTISEMENT

ಕೋಲಾರ: ಹಸಿರು ಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 19:41 IST
Last Updated 10 ಆಗಸ್ಟ್ 2025, 19:41 IST
ಕೋಲಾರ ನಗರದ ಮನೆಯೊಂದರಲ್ಲಿ ಕಾಣಿಸಿಕೊಂಡ ‘ಬಂಬೂ ಪಿಟ್ ವೈಪರ್’ ಹಾವು
ಕೋಲಾರ ನಗರದ ಮನೆಯೊಂದರಲ್ಲಿ ಕಾಣಿಸಿಕೊಂಡ ‘ಬಂಬೂ ಪಿಟ್ ವೈಪರ್’ ಹಾವು   

ಕೋಲಾರ: ದಟ್ಟ ಹಸಿರು ಕಾಡುಗಳಲ್ಲಿ ಕಂಡುಬರುವ ಅತಿವಿಷಯುಕ್ತ ಹಸಿರು ಬಣ್ಣದ ‘ಬ್ಯಾಂಬೂ ಪಿಟ್ ವೈಪರ್’ ಕೋಲಾರದಲ್ಲಿ ಪತ್ತೆಯಾಗಿದೆ. 

ನಗರದ ಜಯನಗರ ರಸ್ತೆಯಲ್ಲಿರುವ ಆಗ್ರೋ ಕಚೇರಿ ಹಿಂಭಾಗದ ಮನೆಯೊಂದರಲ್ಲಿ ಹಸಿರು ಬಣ್ಣದ ಈ ಹಾವು ಕಾಣಿಸಿಕೊಂಡಿತ್ತು. ಉರಗ ಸಂರಕ್ಷಕ ನಾಗರಾಜ್ ಹಾವು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಬೇಲಿ, ಗಿಡ, ಮರಗಳಲ್ಲಿ ಹೆಚ್ಚಾಗಿ ಕಂಡು ಬರುವ ಹಸಿರು ಬಣ್ಣದ ಈ ಹಾವನ್ನು ಸ್ಥಳೀಯರು ‘ಹಸಿರು ಹಾವು’ ಎಂದು ಕರೆಯುತ್ತಾರೆ.  ತ್ರಿಕೋನದಾಕಾರದ ತಲೆ, ಬಳ್ಳಿಯಂತಹ ತೆಳ್ಳನೆಯ ದೇಹ ಹಾಗೂ ದೊಡ್ಡದಾದ ಕಣ್ಣು ಹೊಂದಿರುವ ಈ ವಿಷಕಾರಿ ಹಾವು ರಾತ್ರಿ ಹೊತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. 

ADVERTISEMENT

‘ಈ ಪ್ರಭೇದದ ಹಾವು ಹೆಚ್ಚಾಗಿ ಈಶಾನ್ಯ ಪ್ರದೇಶಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಹಾಗೂ ಪಶ್ಚಿಮ ಘಟ್ಟಗಳು ಸೇರಿದಂತೆ ಮಹಾರಾಷ್ಟ್ರದ ಕೆಲ ಕಾಡುಗಳಲ್ಲಿ ಕಂಡುಬರುತ್ತದೆ. ಹೆಸರಿಗೆ ಬಿದಿರಿನ ಹಾವು ಆದರೂ ಇವುಗಳು ವೃಕ್ಷಜೀವಿಗಳಾಗಿವೆ. ಹಸಿರು ಮರಗಳಲ್ಲಿ ವಾಸವಾಗಿರುತ್ತದೆ. ಬ್ಯಾಂಬೂ ಪಿಟ್ ವೈಪರ್ ತುಂಬಾ ವಿಷಕಾರಿಯಾಗಿದ್ದು, ತೀವ್ರವಾದ ಹಿಮೋಟಾಕ್ಸಿಕ್ ವಿಷ ಹೊಂದಿದೆ. ತೀವ್ರವಾದ ನೋವು, ಊತ ಮತ್ತು ನರಗಳಿಗೆ ಹಾನಿ ಉಂಟುಮಾಡುತ್ತದೆ. ಈ ಪ್ರಭೇದ ಹಾವು ನಮ್ಮಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ’ ಎಂದು ಸ್ನೇಕ್‌ ನಾಗರಾಜ್ ಹೇಳಿದರು.

‘ಬಂಬೂ ಪಿಟ್ ವೈಪರ್’ ಹಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.