
ಮಾಲೂರು: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮಾಲೂರು ನಗರದಲ್ಲಿ 400 ಮನೆಗಳು ಮಂಜೂರಾಗಿದ್ದು, ಅಂಬೇಡ್ಕರ್ ನಗರದಲ್ಲಿ 90 ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ನಗರದ ನಾಲ್ಕನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ 90 ಮನೆಗಳ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು
90 ಮನೆಗಳು ಎಲ್ಲಾ ವರ್ಗದ ಜನರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. ಉಳಿದ 310 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳ ಗುರುತಿಸುವ ಕೆಲಸ ಪ್ರಾರಂಭವಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸುತ್ತಿರುವ ಮನೆಗಳಿಗೆ ಫಲಾನುಭವಿಯ ವಂತಿಕೆ ₹1 ಲಕ್ಷ, ಕೇಂದ್ರ ಸರ್ಕಾರದ್ದು 1.50, ರಾಜ್ಯ ಸರ್ಕಾರದ್ದು ₹4.50 ಲಕ್ಷ, ಒಟ್ಟು ₹6 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಮಾಲೂರು ನಗರದಲ್ಲಿ ನಿವೇಶನ ರಹಿತರು ನಿವೇಶನಗಳಿಗಾಗಿ 22 ವರ್ಷಗಳ ಹಿಂದೆ ಅರ್ಜಿಗಳನ್ನು ಸಲ್ಲಿಸಿದ್ದರು.
ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜಪ್ಪ, ಸದಸ್ಯರಾದ ಎನ್.ವಿ.ಮರಳಿದರ್, ಇಂತಿಯಾಜ್, ಪರಮೇಶ್ ಕೋಮಲ, ಶ್ರೀನಿವಾಸ್, ರಂಗಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.