ಮಾಲೂರು: ಬಂಗಾರಪ್ಪ ನಾಡ ಕಂಡ ಅಪರೂಪದ ರಾಜಕಾರಣಿ. ಅವರು ನೀಡಿದ ಯೋಜನೆಗಳಿಂದ ಇಂದಿಗೂ ಹಲವು ಕುಟುಂಬಗಳು ನೆಲೆ ನಿಂತಿವೆ ಎಂದು ಈಡಿಗ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರರ್ಶಿ ಸೋಮಣ್ಣ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಈಡಿಗ ಸಮಾಜ ಮತ್ತು ಬಂಗಾರಪ್ಪ ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ 1962ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಹಲವು ರೀತಿಯ ಏಳುಬೀಳು ಕಂಡವರು. ಹಠವಾದಿ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಅವರು, ರಾಜಕಾರಣದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದ್ದಾರೆ ಎಂದರು.
ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ವಾಸು, ಖಜಾಂಚಿ ಎಲ್.ಆಶ್ವಥನಾರಾಯಣ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಸದಸ್ಯ ಭಾನು ತೇಜ, ಕಡತೂರು ಅಶೋಕ್, ಕೃಷ್ಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.