ADVERTISEMENT

ಬಂಗಾರಪೇಟೆ | ಧಾರಾಕಾರ ಮಳೆ: ಮನೆಗೆ ನುಗ್ಗಿದ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:03 IST
Last Updated 10 ಆಗಸ್ಟ್ 2025, 3:03 IST
ಬಂಗಾರಪೇಟೆ ಪಟ್ಟಣದ ಸಿ.ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿರುವ ಮಳೆ ನೀರು
ಬಂಗಾರಪೇಟೆ ಪಟ್ಟಣದ ಸಿ.ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿರುವ ಮಳೆ ನೀರು   

ಬಂಗಾರಪೇಟೆ: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿ ನಾಗರಿಕರನ್ನು ಹೈರಾಣು ಮಾಡಿದೆ. ಬಾಲಚಂದ್ರ ಚಿತ್ರಮಂದಿರ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಗಿ ಮಿನಿ ಕೆರೆಯಾಗಿ ಬದಲಾಗಿದೆ. ಸರಾಗವಾಗಿ ಮಳೆ ನೀರು ಹರಿಯದೆ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ನಿದ್ದೆಗೆಟ್ಟು ಜನರು ಮನೆಯಿಂದ ನೀರು ಹೊರ ಹಾಕಿದರು.

ತಗ್ಗು ಪ್ರದೇಶವಾದ ಸೇಟ್ ಕಾಂಪೌಂಡ್ ಬಡಾವಣೆಯಲ್ಲಿ ಎಲ್ಲ ರಸ್ತೆಗಳು ಮಳೆ ನೀರಿನ ಜೊತೆ ಕೊಳಚೆ ನೀರು ಮಿಶ್ರಣಗೊಂಡು ಮನೆಗಳ ಮುಂದೆ ಹರಿಯಿತು. ಕೆಲವು ಮನೆಗಳಿಗೂ ನೀರು ನುಗ್ಗಿ ಆತಂಕ ಸೃಷ್ಟಿಸಿತು.

ಮನೆಗಳಿಗೆ ನುಗ್ಗಿದ ನೀರು ಹೊರ ಚೆಲ್ಲಲು ನಿವಾಸಿಗಳು ಹರಸಾಹಸಪಟ್ಟರು. ಈ ರಸ್ತೆಯ ಚರಂಡಿಗಳು ಕಿರಿದಾಗಿದ್ದು, ಹೂಳಿನಿಂದ ತುಂಬಿದೆ. ಮಳೆ ನೀರು ರಸ್ತೆಗಳ ಮೇಲೆ ಹರಿದು ರಸ್ತೆಗಳು ಕೆರೆಯಂತಾಗಿವೆ.

ADVERTISEMENT

ರಸ್ತೆ ಪಕ್ಕದಲ್ಲೇ ಇರುವ ಅಂಗಡಿಗಳಿಗೂ ನೀರು ನುಗ್ಗಿದೆ. ರಸ್ತೆಗಳೆಲ್ಲಾ ಕೆರೆಯಂತಾಗಿ ಜನರು ಪರದಾಡಿದರು. ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಇಡೀ ರಾತ್ರಿ ಶ್ರಮಿಸಬೇಕಾಗಿದೆ ಎಂದು ರಹೀಂ ಕಾಂಪೌಂಡ್‌ನ ನಿವಾಸಿ ಅಲಿಮಾ ಹೇಳಿದರು. 

ಮಳೆ ಸುರಿದರೆ ನೀರು ನುಗ್ಗುತ್ತಿದೆ. ಚರಂಡಿ ಹೂಳು ತೆರವುಗೊಳಿಸಲು ಕೂಲಿ ಕಾರ್ಮಿಕ ಪ್ರಭು ಒತ್ತಾಯಿಸಿದ್ದಾರೆ.

‌ಉತ್ತಮ ಮಳೆಯಿಂದಾಗಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ನಿಗದಿತ ಸಮಯಕ್ಕೆ ಮಳೆಯಾಗದ ಪರಿಣಾಮ ನೆಲಗಡಲೆ ಬಿತ್ತನೆ ಕುಂಠಿತವಾಗಿದೆ. ನೀರಿನ ಲಭ್ಯತೆ ಇರುವ ರೈತರು ಮಾತ್ರ ಈ ಬಾರಿ ಬಿತ್ತನೆ ಮಾಡಿದ್ದಾರೆ. ಸಾಮೆ, ಸಜ್ಜೆ, ತೊಗರಿ ಬೆಳೆ ಕೂಡ ಕಡಿಮೆಯಾಗಿದೆ. 

ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲದಲ್ಲಿ ರಾಗಿ ಪೈರನ್ನು ನಾಟಿ ಮಾಡುತ್ತಿರುವುದು.
ಮನೆಗಳಿಗೆ ನುಗ್ಗಿರುವ ಮಳೆ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.