ಬಂಗಾರಪೇಟೆ: ಪಾಕಿಸ್ತಾನದೊಂದಿಗೆ ಇಲ್ಲಿವರೆಗೂ ಭಾರತ ಕಾರ್ಗಿಲ್ ಸೇರಿ ಮೂರು ಸಲ ಯುದ್ಧ ಮಾಡಿದೆ. ಮತ್ತೆ ಮತ್ತೆ ದೇಶದ ಮೇಲೆ ದಾಳಿ ಮಾಡುವ ಪಾಕ್ ಉಗ್ರರನ್ನು ಸದೆಬಡಿಯುವ ತನಕ ಕದನ ವಿರಾಮ ಸಲ್ಲದು ಎಂದು ದಲಿತ ಸಮಾಜ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ವಿರುದ್ದ ನಡೆಯುತ್ತಿರುವ ಹೋರಾಟ ದೇಶದ ಯುವಕರಿಗೆ ಸ್ಪೂರ್ತಿ ತಂದಿದೆ. ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿಯಬೇಕಿದೆ. ಪಾಕಿಸ್ತಾನ ದಯೆ, ಅನುಕಂಪಕ್ಕೆ ಯೋಗ್ಯವಾದ ರಾಷ್ಟ್ರವಲ್ಲ ಎನ್ನುವುದು ಇಸ್ಲಾಂ ದೇಶಗಳು ಸೇರಿದಂತೆ ಇಡೀ ಜಗತ್ತಿಗೇ ಅರಿವಾಗಿದೆ. ಇಂತಹ ದೇಶದ ಜೊತೆ ಯುದ್ಧ ವಿರಾಮ ಅಗತ್ಯವಿರಲಿಲ್ಲ. ಆದರೆ,ಅಮೆರಿಕದ ವಿಶ್ವಾಸಕ್ಕೆ ಕಟ್ಟುಬಿದ್ದು ಕದನ ವಿರಾಮ ಘೋಷಿಸಿದರೂ ಪಾಕಿಸ್ತಾನ ನಿಯಮಗಳನ್ನು ಉಲ್ಲಂಘಿಸಿದೆ ಎಂದರು.
ಸಭೆಯಲ್ಲಿ ಗೌತಮ್,ಕರ್ಣ,ಅಮರೇಶ್,ಆಟೋ ಮಂಜು,ಪ್ರದೀಪ್,ರವಿ,ಅಶೋಕ್,ಅಯ್ಯಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.