ADVERTISEMENT

ಬೇತಮಂಗಲ | ರಸ್ತೆ ಡಾಂಬರೀಕರಣ ಕಾಮಗಾರಿ ವೀಕ್ಷಿಸಿದ ಶಾಸಕಿ ರೂಪಕಲಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:17 IST
Last Updated 20 ಸೆಪ್ಟೆಂಬರ್ 2025, 6:17 IST
ಬೇತಮಂಗಲ ಸಮೀಪದ ಸುವರ್ಣಹಳ್ಳಿ ಗ್ರಾಮದಿಂದ ವೆಂಗಸಂದ್ರ ಕ್ರಾಸ್‌ವರೆಗೂ ನಡೆಯುತ್ತಿರುವ ಡಾಂಬರು ರಸ್ತೆ ಕಾಮಗಾರಿಯನ್ನು ಶಾಸಕಿ ರೂಪಕಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು 
ಬೇತಮಂಗಲ ಸಮೀಪದ ಸುವರ್ಣಹಳ್ಳಿ ಗ್ರಾಮದಿಂದ ವೆಂಗಸಂದ್ರ ಕ್ರಾಸ್‌ವರೆಗೂ ನಡೆಯುತ್ತಿರುವ ಡಾಂಬರು ರಸ್ತೆ ಕಾಮಗಾರಿಯನ್ನು ಶಾಸಕಿ ರೂಪಕಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಬೇತಮಂಗಲ: ಸುವರ್ಣಹಳ್ಳಿ ಗ್ರಾಮದಿಂದ ವೆಂಗಸಂದ್ರ ಕ್ರಾಸ್‌ವರೆಗೆ ರಸ್ತೆ ಡಾಂಬರೀಕರಣಕ್ಕೆ ಸುಮಾರು ₹4 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕಿ ರೂಪಕಲಾ ತಿಳಿಸಿದರು.

ಸುವರ್ಣಹಳ್ಳಿ ಗ್ರಾಮದಿಂದ ವೆಂಗಸಂದ್ರ ಕ್ರಾಸ್‌ವರೆಗೂ ಸುಮಾರು 2.5 ಕಿ.ಮೀ ಡಾಂಬರು ರಸ್ತೆ ಕಾಮಗಾರಿ ಯನ್ನು ಈಚೆಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಸುವರ್ಣಹಳ್ಳಿ ಗ್ರಾಮದಿಂದ ವೆಂಗಸಂದ್ರ ಕ್ರಾಸ್‌ವರೆಗೆ ರಸ್ತೆಯು ತುಂಬಾ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ತೊಂದರೆ ಯಾಗುತ್ತಿತ್ತು. ಹಾಗಾಗಿ ರಸ್ತೆ ಡಾಂಬರೀಕರಣ ಹಾಗೂ ಎರಡು ಕಡೆ ಚರಂಡಿ ನಿರ್ಮಿಸಲಾಗುವುದು.

ADVERTISEMENT

ಎಪಿಎಂಸಿ ಅಧ್ಯಕ್ಷ ವಿಜಯ ರಾಘವ್ ರೆಡ್ಡಿ, ಸುರೇಂದ್ರ ಗೌಡ, ದಶರತ್ ರೆಡ್ಡಿ, ಯಶೋದಮ್ಮ ಶ್ರೀನಿವಾಸ್ ರೆಡ್ಡಿ, ಯುವರಾಣಿ ವೆಂಕಟಾಚಲಪತಿ, ಮುರಳಿ ಕೃಷ್ಣ, ಭವಾನಿ ಜಯಪಾಲ್, ಸುವರ್ಣ ವೆಂಕಟರಾಮ್, ಭಾರ್ಗವ್ ರಾಮ್, ಕಾರಿ ಪ್ರಸನ್ನ, ರಾಮುಬಾಬು, ವೆಂಕಟರಾಮ್, ಕೃಷ್ಣಮೂರ್ತಿ, ಅಪ್ಪಾಜಿ ಗೌಡ, ಮುನಿಸ್ವಾಮಿ ರೆಡ್ಡಿ, ಶಂಕರ್, ಮುರಳಿ ಮೋಹನ್, ಎಂಬಿಎ ಕೃಷ್ಣಪ್ಪ, ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.