ಬೇತಮಂಗಲ: ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾದೇನಹಳ್ಳಿಯಲ್ಲಿ ನೂತನವಾಗಿ ₹11.50ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಶಾಸಕಿ ರೂಪಕಲಾ ಶಶಿಧರ್ ಉದ್ಘಾಟಿಸಿದರು.
ಗಡಿ ಭಾಗದ ದಾದೇನಹಳ್ಳಿ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದ ಶುದ್ಧ ನೀರಿನ ಘಟಕವನ್ನು ನಿರ್ಮಿಸಿ ಗ್ರಾಮಸ್ಥರೊಂದಿಗೆ ಉದ್ಘಾಟನೆ ಮಾಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದರು.
ಗ್ರಾಮದಲ್ಲಿ ಬಹುತೇಕ ಜನರಿಗೆ ನಿವೇಶನವೇ ಇಲ್ಲ. ನಿವೇಶನ ಕಟ್ಟಿಕೊಳ್ಳಲು ಜಾಗವೂ ಇಲ್ಲ. ಸರ್ಕಾರದಿಂದ ನಿವೇಶನ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ವಕೀಲ ಪದ್ಮನಾಭ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭವಾನಿ ಜಯಪಾಲ್, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ನಾರಾಯಣಪ್ಪ, ಮುರಳಿ ಮೋಹನ್, ಪುರುಷೋತ್ತಮ್, ಮುಖಂಡರಾದ ಸೀನಪ್ಪ, ನಾರಾಯಣಸ್ವಾಮಿ, ಸುಬ್ರಮಣಿ, ಅಸಿಂ ಪಾಷಾ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.