ADVERTISEMENT

ಕೋಲಾರದಲ್ಲಿ ಅಪಹರಣಕ್ಕೊಳಗಾಗಿದ್ದ ಮಗು ಶ್ರೀನಿವಾಸಪುರದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 16:09 IST
Last Updated 14 ಸೆಪ್ಟೆಂಬರ್ 2023, 16:09 IST
<div class="paragraphs"><p>ಅಪಹರಣಕ್ಕೊಳಗಾಗಿದ್ದ  ಬಾಲಕ</p></div>

ಅಪಹರಣಕ್ಕೊಳಗಾಗಿದ್ದ ಬಾಲಕ

   

ಕೋಲಾರ: ನಗರದಲ್ಲಿ ಗುರುವಾರ ಸಂಜೆ ಅಪಹರಣಕ್ಕೆ ಒಳಗಾಗಿದ್ದ ಐದು ವರ್ಷ ಬಾಲಕನನ್ನು ಪೊಲೀಸರು ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ರಾತ್ರಿ ಪತ್ತೆ ಹಚ್ಚಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಲೋಕೇಶ್‌ ಎಂಬುವರ ಪುತ್ರ ಯಶ್ಮಿತ್‌ ಗೌಡ ಅಪಹರಣಕ್ಕೆ ಒಳಗಾದ ಬಾಲಕ. ಈತ ಟಮಕದ ಸರ್‌ ಎಂ.ವಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾನೆ.

ADVERTISEMENT

ದುಷ್ಕರ್ಮಿಗಳು ಕೆಂಪು ಬಣ್ಣದ‌ ಪಲ್ಸರ್ ಬೈಕಿನಲ್ಲಿ ಅಪಹರಿಸಿ ಕೋಲಾರದಿಂದ ಚಿಂತಾಮಣಿ ಮಾರ್ಗವಾಗಿ ತೆರಳಿದರು ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

‘ಬಾಲಕ ಸುರಕ್ಷಿತವಾಗಿದ್ದು, ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.