ಶ್ರೀನಿವಾಸಪುರ: ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಉಸಿರಾಡಲು ಶುದ್ಧಗಾಳಿ ಇಲ್ಲದೆ ರಾಸಾಯನಿಕ ವಿಷ ಮಿಶ್ರಿತ ಗಾಳಿ ಉಸಿರಾಡುವಂತಾಗಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಹೇಳಿದರು.
ಪಟ್ಟಣದ ಪುರಸಭೆಯಿಂದ ಗುರುವಾರ ಅಂತರರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಉಳಿಸಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪ್ರತಿ ಮನೆ ಸುತ್ತಮುತ್ತ ಮಗುವಿಗೊಂದು ಸಸಿ ನೆಟ್ಟು, ಮರಗಳಾಗಿಸಿ, ವನವಾಗಿಸಬೇಕು. ಮುಂದಿನ ಪೀಳಿಗೆಗಾಗಿ ಶುದ್ಧ ಗಾಳಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದರು.
‘ಪ್ಲಾಸ್ಟಿಕ್ ಬಳಸುವುದು ನಿಷೇಧ ಮಾಡಬೇಕು. ಪರಿಸರ ಉಳಿಸುವ ವಿಚಾರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ಲಾಸ್ಟಿಕ್‍ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ’ ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಸುನಿತಾ ಮಾತನಾಡಿ, ‘ಪ್ರಕೃತಿಯ ಮಹತ್ವ ನಮಗೆ ಹೆಚ್ಚು ಅರ್ಥವಾಗುತ್ತಿದೆ. ಹೀಗಾಗಿ, ನಾವು ಇತರೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಮಕ್ಕಳು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದವರು. ಅವರಿಗೂ ಪರಿಸರದ ಕಾಳಜಿಯನ್ನು ಅರ್ಥ ಮಾಡಿಸುವ ಅಗತ್ಯ ಹೆಚ್ಚಿದೆ’ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಮಾತನಾಡಿದರು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯಾಧಿಕಾರಿ ವಿ.ನಾಗರಾಜ್, ಸದಸ್ಯರಾದ ಸಂಜಯ್‍ಸಿಂಗ್, ಎನ್‍ಎನ್‍ಆರ್ ನಾಗರಾಜ್, ಆನಂದಗೌಡ, ಜಯಲಕ್ಷ್ಮಿ, ಕೆ.ಅನೀಸ್ ಅಹ್ಮದ್, ನಾಮನಿದೇರ್ಶಕರಾದ ಹೇಮಂತ್, ಶಿವರಾಜ್, ನರಸಿಂಹಮೂರ್ತಿ, ವ್ಯವಸ್ಥಾಪಕ ನವೀನ್‍ಚಂದ್ರ, ಕಂದಾಯ ಅಧಿಕಾರಿ ಎನ್.ಶಂಕರ್, ಪರಿಸರ ಎಂಜಿನಿಯರ್ ಲಕ್ಷ್ಮೀಶ್, ಆರೋಗ್ಯಾಧಿಕಾರಿ ಸಂತೋಷ, ಸಿಬ್ಬಂದಿ ಪ್ರತಾಪ್, ಸುರೇಶ್, ಶಾರದಾ, ಭಾಗ್ಯಮ್ಮ, ಗೌತಮ್, ಚಂದು, ನಾಗೇಶ್, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.