
ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆಯಿತು.
ಕಳೆದ ನಾಲ್ಕು ತಿಂಗಳಲ್ಲಿ ₹1.2 ಕೋಟಿ ನಗದು, 31 ಗ್ರಾಂ ಬಂಗಾರ, 458 ಗ್ರಾಂ ಬೆಳ್ಳಿ ಹಾಗೂ ವಿದೇಶಿ ನೋಟುಗಳು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಭಾಗ್ಯ ತಿಳಿಸಿದರು.
ಹುಂಡಿ ಎಣಿಕೆ ಬೆಳಗ್ಗೆ ಆರಂಭವಾಗಿ ರಾತ್ರಿ 8ರವರೆಗೆ ನಡೆಯಿತು. ಎಣಿಕೆ ಕಾರ್ಯದಲ್ಲಿ ಮುಜರಾಯಿ ತಹಶೀಲ್ದಾರ್ ಮಹೇಶ್ ಕುಮಾರ್, ಪ್ರಥಮ ದರ್ಜೆ ಸಹಾಯಕರಾದ ಪದ್ಮಾವತಿ, ಲಕ್ಕೂರು ಹೋಬಳಿ ಉಪ ತಹಶೀಲ್ದಾರ್ ಕೆ.ಎಸ್.ಚೇತನ್, ಮಮತಾ, ರೂಪೇಂದ್ರ, ಆಲಂಬಾಡಿ ಎಂ.ಗೋಪಾಲ್, ಕೃಷ್ಣಮೂರ್ತಿ, ತೇಜಸ್ವಿನಿ, ಕೃಷ್ಣಾರೆಡ್ಡಿ, ಶ್ರೀನಿವಾಸನ್, ತಿಮ್ಮರಾಯಪ್ಪ, ಭಾಗ್ಯಶ್ರೀ, ಶ್ರೀನಿವಾಸಯ್ಯ, ಗೋಪಾಲ್, ಸುರೇಶ್ ಬಾಬು, ಟಿ.ಆರ್.ವೆಂಕಟೇಶ್ ಗೌಡ, ಯಶವಂತ ರಾವ್, ಪೇಷ್ಕಾರ್ ಚಲುವಸ್ವಾಮಿ, ತಾಲ್ಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು, ಕೆನರಾ ಬ್ಯಾಂಕ್ ಸಿಬ್ಬಂದಿ ಮತ್ತು ಸ್ವಯಂ ಸೇವಕರಾಗಿ ಭ್ರಮರಾಂಭ ಸೇವಾ ಸಮಿತಿಯ 100 ಮಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.