ADVERTISEMENT

ಶ್ರೀನಿವಾಸಪುರ: ಚೌಡೇಶ್ವರಿ ಬಿಂಬ, ಗಣಪತಿ ವಿಗ್ರಹ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:02 IST
Last Updated 16 ಅಕ್ಟೋಬರ್ 2025, 7:02 IST
ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧಪಡಿಸಲಾಗಿರುವ ದೇವಾಲಯ
ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧಪಡಿಸಲಾಗಿರುವ ದೇವಾಲಯ    

ಶ್ರೀನಿವಾಸಪುರ: ತೊಂಡಾಳ ಗ್ರಾಮದಲ್ಲಿ ಅ.17 ರಿಂದ ಮೂರು ದಿನ ಚೌಡೇಶ್ವರಿ ದೇವಿಯ ನೂತನ ಬಿಂಬ, ಗಣಪತಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಭಜನೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ರವಿಕುಮಾರ್ ತಿಳಿಸಿದರು.

ದೇವತಾ ಕಾರ್ಯಕ್ಕೆ ಹಲವರು ಕೈ ಜೋಡಿಸಿದ್ದು, ‌ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಐಪಿಎಸ್ ಅಧಿಕಾರಿ ಡಿ.ದೇವರಾಜ್, ಎಸ್ಪಿ ನಿಖಿಲ್ ಬಿ., ಎಲ್.ಗೋಪಾಲಕೃಷ್ಣ, ಕೆ.ವಿ.ಶಂಕರಪ್ಪ, ಸೊಣ್ಣೇಗೌಡ, ವಿನಯ್ ಬೈರೇಗೌಡ, ಎಸ್.ವಿ.ಮಂಜುನಾಥ, ಎವಿಜಿ ನಟರಾಜ್, ಮುನಿರತ್ನಮ್ಮ ಮುನಿವೆಂಕಟಪ್ಪ, ವೆಂಕಟೇಶಪ್ಪ, ಬ್ಯಾಲಹಳ್ಳಿ ಗೋವಿಂದಗೌಡ, ಸಿಎಂ‌ಆರ್ ಶ್ರೀನಾಥ್, ಡೆಕ್ಕನ್ ರಾಮಕೃಷ್ಣಪ್ಪ, ಸೊಣ್ಣೇಗೌಡ, ವಸುಂಧರಾ ಆನಂದ್, ಎಂ.ಕೃಷ್ಣಪ್ಪ, ಎಸ್.ವಿ.ಹರಿನಾಥ್, ಪ್ರಸನ್ನಕುಮಾರ್, ಕೆ.ಎನ್.ಹರೀಶ್ ಬಾಬು ಚಂದ್ರೇಗೌಡ ಭಾಗವಹಿಸಲಿದ್ದಾರೆ. ಭಕ್ತಾದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯೆ ಆಂಜಿನಮ್ಮ, ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ನಿರ್ಮಲಾ, ದಾನಿಗಳಾದ ವೆಂಕಟಮ್ಮ, ಇ.ಮಂಜುನಾಥ್, ಶಿಲ್ಪ, ಗ್ರಾಮಸ್ಥರಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಶ್ರೀನಿವಾಸಪ್ಪ, ಮೋಹನ್, ಸುರೇಂದ್ರ, ಶ್ರೀರಾಮಪ್ಪ, ಮಧು, ಚೇತನ್, ಬಿ.ಎಂ.ರಾಮೇಗೌಡ, ಮುನಿನಾರಾಯಣಪ್ಪ, ಕೃಷ್ಣಪ್ಪ, ನಾರಾಯಣಪ್ಪ, ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.