ADVERTISEMENT

ಕೋವಿಡ್‌ ಸಂಕಷ್ಟ: ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 13:47 IST
Last Updated 24 ಸೆಪ್ಟೆಂಬರ್ 2021, 13:47 IST

ಕೋಲಾರ: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಕೆಜಿಎಫ್ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡ, ಮಧ್ಯಮ ಹಾಗೂ ಮೇಲ್ವರ್ಗದವರು ಸೇರಿದಂತೆ ಎಲ್ಲಾ ವರ್ಗದ 2.40 ಲಕ್ಷ ಜನರಿಗೆ ಹಣಕಾಸು ನೆರವು ನೀಡಲಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೂ ಚೆಕ್‌ ಮೂಲಕ ಆರ್ಥಿಕ ನೆರವು ತಲುಪಿಸಲಾಗುತ್ತದೆ. 4 ಮಂದಿ ಸದಸ್ಯರ ಕುಟುಂಬಕ್ಕೆ ₹ 2 ಸಾವಿರ, 6 ಸದಸ್ಯರ ಕುಟುಂಬಕ್ಕೆ ₹ 3 ಸಾವಿರ, 8 ಸದಸ್ಯರ ಕುಟುಂಬಕ್ಕೆ ₹ 4 ಸಾವಿರ ಮತ್ತು 10 ಸದಸ್ಯರ ಕುಟುಂಬಕ್ಕೆ ₹ 5 ಸಾವಿರ ನೀಡಲಾಗುತ್ತದೆ. ಈ ಸೇವೆಗೆ ನರಸಾಪುರದಲ್ಲಿ ಅ.10ರಂದು ಚಾಲನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಆರ್ಥಿಕ ನೆರವು ಪಡೆಯಲು ಇಚ್ಛಿಸುವವರು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ವಿವರದ ಜತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9845070999 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.