ADVERTISEMENT

ಮಾಲೂರು: ಉಳ್ಳೇರಹಳ್ಳಿ ಚಲೋ, ಬೃಹತ್ ಪ್ರತಿಭಟನೆ, ಜೈ ಭೀಮ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 9:02 IST
Last Updated 25 ಸೆಪ್ಟೆಂಬರ್ 2022, 9:02 IST
'ಉಳ್ಳೇರಹಳ್ಳಿ' ಚಲೋ ವಿವಿಧ ಪ್ರಗತಿಪರ ಸಂಘಟನೆಗಳ ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
'ಉಳ್ಳೇರಹಳ್ಳಿ' ಚಲೋ ವಿವಿಧ ಪ್ರಗತಿಪರ ಸಂಘಟನೆಗಳ ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.   

ಮಾಲೂರು (ಕೋಲಾರ ಜಿಲ್ಲೆ): ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಬಾಲಕನಿಗೆ ದಂಡ ವಿಧಿಸಿದ್ದನ್ನು ಖಂಡಿಸಿ 'ಉಳ್ಳೇರಹಳ್ಳಿ' ಚಲೋ ಹಮ್ಮಿಕೊಂಡಿದ್ದು, ವಿವಿಧ ಪ್ರಗತಿಪರ ಸಂಘಟನೆಗಳ ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.

ಜೈ ಭೀಮ್ ಘೋಷಣೆ ಕೂಗುತ್ತಾ ದ್ವಿಚಕ್ರ ವಾಹನಗಳಲ್ಲಿ ಸಾಗಿ ಬಂದರು.

ಟೇಕಲ್ ರೈಲ್ವೆ ನಿಲ್ದಾಣದಿಂದ ಸೌಹಾರ್ದ ಜಾಥಾ ಆರಂಭವಾಗಿದ್ದು, ಉಳ್ಳೇರಹಳ್ಳಿಯ ಸಂತ್ರಸ್ತ ಕುಟುಂಬದ ನಿವಾಸದತ್ತ ದಾಪುಗಾಲು ಇಟ್ಟಿದ್ದಾರೆ.

ADVERTISEMENT

ದಲಿತ ಸಂಘಟನೆ,‌ ರೈತ ಸಂಘಟನೆ,‌ ಮಹಿಳೆ ಸಂಘಟನೆ, ಸಿಪಿಐಎಂ, ಕನ್ನಡಪರ ಸಂಘಟನೆ, ಮುಸ್ಲಿಂ ಸಂಘಟನೆ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು, ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.