ADVERTISEMENT

ಅಣೆಕಟ್ಟು ನಿರ್ಮಾಣ: ರಾಜಕೀಯ ಅಡ್ಡಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 13:31 IST
Last Updated 9 ಫೆಬ್ರುವರಿ 2020, 13:31 IST

ಕೋಲಾರ: ‘ಎತ್ತಿನಹೊಳಗೆ ಯೋಜನೆ ಅಣೆಕಟ್ಟು ನಿರ್ಮಾಣಕ್ಕೆ ರಾಜಕೀಯ ದುರುದ್ದೇಶದಿಂದ ಕೆಲ ವ್ಯಕ್ತಿಗಳು ಅಡ್ಡಿಪಡಿಸುತ್ತಿರುವ ಹಿನ್ನಲೆಯಲ್ಲಿ ಕೆಲಸಕ್ಕೆ ತೊಂದರೆಯಾಗಿದೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎತ್ತಿನಹೊಳೆ ನೀರು ಶೇಖರಣೆಗೆ2 ಸಾವಿರ ಎಕರೆ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಮಾಡಬೇಕಾಗಿದೆ. ಜಿಲ್ಲೆಗೆ ನೀರು ಹರಿದರೆ ಈ ಭಾಗದ ಜನ ಸುಭೀಕ್ಷವಾಗಿರುತ್ತಾರೆ ಎಂಬ ಅತಂಕ ಅವರಲ್ಲಿ ಕಾಡುತ್ತಿರಬೇಕು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಎತ್ತಿನಹೊಳೆಗೆ ಸಕಲೇಶಪುರ ರೈತರು ಸ್ಪಂದಿಸಿ ಸಹಕಾರ ನೀಡಿದ್ದರಿಂದಲೇ ಪವರ್ ಹೌಸ್, ಅಣೆಕಟ್ಟು ಕಾಲುವೆ ನಿರ್ಮಾಣವಾಗಿದೆ. ಆದರೆ ನೀರು ಸಂಗ್ರಹಿಸಬೇಕಾದ2 ಸಾವಿರ ಎಕರೆ ವಿಸ್ತೀರ್ಣಕ್ಕೆ ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿಯಾಗಿದ್ದು, ಅದನ್ನು ನಿವಾರಿಸಬೇಕಾಗಿದೆ’ ಎಂದರು.

ADVERTISEMENT

‘ಕೆಸಿ ವ್ಯಾಲಿ ಯೋಜನೆಯಿಂದ ನೀರು ಹರಿಯುತ್ತಿದ್ದರೂ ದಾರಿದ್ರ ತಪ್ಪಿಲ್ಲ. ಮುಂದಕ್ಕೆ ನೀರು ಹರಿಯದಂತೆ ರೈತರು ನಿಯಮಬಾಹಿರವಾಗಿ ಮೋಟಾರ್ ಪಂಪ್ ಇಟ್ಟುಕೊಂಡು ನೀರು ಬಳಕೆ ಮಾಡುತ್ತಿದ್ದಾರೆ. ರೈತರ ಮನವೊಲಿಸುವ ಕೆಲಸ ಮುಖಂಡರು ಸ್ವಯಂಸೇವಕರಂತೆ ಮಾಡಿ’ ಎಂದು ತಾಕೀತು ಮಾಡಿದರು.

‘ಶುದ್ದನೀರಿನ ಘಟಕಗಳನ್ನು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಸ್ಥಾಪಿಸಿರುವುದರಿಂದ ಮಹಿಳೆಯರು ಮೂಳೆ ಸಂಬಂಧಿ ಅನೇಕ ಕಾಯಿಲೆಗಳಿಂದ ಮುಕ್ತವಾಗಿದ್ದಾರೆ. ರೋಗಗಳು ಕಡಿಮೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಕೀಳುವ ದುಸ್ಥಿತಿ ತಡೆಗೆ ಮುಂದಾಗಿದ್ದಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದರು. ಇದನ್ನು ಶೇ.100ರಷ್ಟು ಅನುಷ್ಟಾನಕ್ಕೆ ಪ್ರಯತ್ನಿಸುತ್ತೆನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.