ADVERTISEMENT

ಕೋಲಾರ | ಅಭಿವೃದ್ಧಿ ಕೆಲಸವೇ ವಿರೋಧಿಗಳಿಗೆ ಉತ್ತರ: ಶಾಸಕ ಕೊತ್ತೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:14 IST
Last Updated 25 ಆಗಸ್ಟ್ 2025, 4:14 IST
<div class="paragraphs"><p>ಸಗ್ರಹ ಚಿತ್ರ&nbsp;</p></div>

ಸಗ್ರಹ ಚಿತ್ರ 

   

ಕೋಲಾರ: ‘ಕೋಲಾರ ವಿಧಾನಸಭಾ ಕ್ಷೇತ್ರದ ನರಸಾಪುರ ಭಾಗದಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಶಾಶ್ವತವಾದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳ್ಳಲಿವೆ. ನರಸಾಪುರದ ಅಭಿವೃದ್ಧಿಗೆ ₹ 30 ಕೋಟಿ ಅನುದಾನ ನೀಡಲಾಗಿದೆ. ಈ ಅಭಿವೃದ್ಧಿ ಕಾರ್ಯಗಳೇ ವಿರೋಧಿಗಳಿಗೆ ಉತ್ತರ’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಭಾನುವಾರ ಸುಮಾರು ₹ 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

ಈಗಾಗಲೇ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿ ಕೆಲಸ ನಡೆಯತ್ತಿದೆ. ಇನ್ನೊಂದು ಕೋಟಿಗೆ ಅನುಮೋದನೆ ಸಹ ಸಿಕ್ಕಿದೆ. ‌ಮುಂದೆ ಇನ್ನೊಂದು ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಅದು ಬಂದರೆ ನರಸಾಪುರ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಲಿವೆ. ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವ ಜೊತೆಗೆ ಯಾವುದೇ ದೂರು ಬರಬಾರದು ಎಂದರು.

ಗ್ರಾಮದ ಯುವಕರು ವಾಲಿಬಾಲ್ ಕೋರ್ಟ್‌ಗೆ ಬೇಡಿಕೆ ಇಟ್ಟರು. ಆಗ ಮಧ್ಯಪ್ರವೇಶಿಸಿದ ಶಾಸಕರು, ‘ಯುವಕರು ದೇಶದ ಬೆನ್ನೆಲುಬು. ಕ್ರೀಡೆಯನ್ನು ಪೋತ್ಸಾಹ ಮಾಡಬೇಕು, ಆದರೆ ಇವತ್ತು ಇರುವ ಸರ್ಕಾರಿ ಜಾಗವು ಬೇರೆ ಬೇರೆ ಕಾರಣಗಳಿಗಾಗಿ ಕಚೇರಿಗಳಿಗೆ ಬಳಸಿಕೊಳ್ಳಲಾಗಿದೆ. ಅಭಿವೃದ್ಧಿ ಮಾಡಲು ಹೋದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಯುವಕರು ಸಹ ಅಭಿವೃದ್ಧಿಗೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನರಸಾಪುರ ಗ್ರಾ.ಪಂ ಅಧ್ಯಕ್ಷ ಕುಮಾರ್, ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ನಾರಾಯಣಸ್ವಾಮಿ, ಮೈಲಾಂಡಹಳ್ಳಿ ಮುರಳಿ, ಎಂ.ಟಿ.ಬಿ ಶ್ರೀನಿವಾಸ್, ಚಂದ್ರ ಮೋಹನ್, ನವೀನ್, ಗೋಪಿ, ವೀರೇಂದ್ರ ಪಾಟೀಲ್, ಜೈಭೀಮ್ ಪ್ರಕಾಶ್, ಚಿನ್ನಾಪುರ ನಾರಾಯಣಸ್ವಾಮಿ, ನದೀಂ, ವನಜಾ, ಸಯೀದ್ ಪಾಷ, ಪಿಡಿಒ ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.