ADVERTISEMENT

ದಿನಸಿ ವಿತರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 14:20 IST
Last Updated 6 ಏಪ್ರಿಲ್ 2020, 14:20 IST
ಕೋಲಾರದ ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯದ ಭಕ್ತರು ಕಠಾರಿಪಾಳ್ಯದಲ್ಲಿ ಸೋಮವಾರ ಬಡ ಜನರಿಗೆ ದಿನಸಿ ವಿತರಿಸಿದರು.
ಕೋಲಾರದ ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯದ ಭಕ್ತರು ಕಠಾರಿಪಾಳ್ಯದಲ್ಲಿ ಸೋಮವಾರ ಬಡ ಜನರಿಗೆ ದಿನಸಿ ವಿತರಿಸಿದರು.   

ಕೋಲಾರ: ನಗರದ ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯದ ಭಕ್ತರು 400ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಸೋಮವಾರ ದಿನಸಿ ವಸ್ತುಗಳನ್ನು ವಿತರಿಸಿದರು.

‘ದೇವಾಲಯದ ಭಕ್ತ ಮಂಡಳಿಯು ಈ ನೆರವು ನೀಡುತ್ತಿದೆ. ಈಗಾಗಲೇ 420 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಗಿದೆ. ಜತೆಗೆ ಅನಾಥಾಲಯಗಳಿಗೂ ಸಹಾಯ ನೀಡುತ್ತಿದ್ದು, ಇನ್ನೂ 100 ಮನೆಗಳಿಗೆ ನೆರವಾಗುವ ಉದ್ದೇಶವಿದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಮುರಳಿ ರಾಮಾನುಜಂ ತಿಳಿಸಿದರು.

‘ಹೊರ ರಾಜ್ಯದ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ಕಠಾರಿಪಾಳ್ಯದ ಸಮೀಪ ತಾತ್ಕಾಲಿಕವಾಗಿ ಶೆಡ್‌ ಹಾಕಿಕೊಂಡು ವಾಸವಿವೆ. ದಿಗ್ಬಂಧನ ಆದೇಶದಿಂದ ಈ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಇವರಿಗೆ ಆಹಾರ ಪದಾರ್ಥ ವಿತರಣೆ ಮಾಡಿದ್ದೇವೆ’ ಎಂದು ಹೇಳಿದರು.

ADVERTISEMENT

‘ಹಸಿವಿಗೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ನಾವೆಲ್ಲಾ ಭಾರತಾಂಬೆಯ ಮಕ್ಕಳು. ದೇಶ ಸಂಕಷ್ಟಕ್ಕೆ ಸಿಲುಕಿರುವ ಸನ್ನಿವೇಶದಲ್ಲಿ ಬಡ ಜನರಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರು ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.

ಎಸ್‍ಐ ಶಂಕರ್, ದೇವಾಲಯದ ಭಕ್ತರಾದ ಪ್ರಭಾಕರ್, ಅನಿಲ್‌ಕುಮಾರ್, ವಿನೋದ್ ಶರ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.