ಬಂಗಾರಪೇಟೆ: ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ, ವೈದೇಹಿ ಆಸ್ಪತ್ರೆ ಮತ್ತು ಶಾಂತ ಜೀವಜ್ಯೋತಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಜಯಣ್ಣ ಮಾತನಾಡಿ, ‘ಆರೋಗ್ಯ ಶಿಬಿರಗಳು ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೆ ಸುವರ್ಣಾವಕಾಶವಾಗಿದ್ದು, ಪ್ರತಿಯೊಬ್ಬರೂ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು. ಆರೋಗ್ಯವಂತ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಜ್ಞ ವೈದ್ಯರ ಕೊರತೆ ಇದೆ. ಇಂಥ ಶಿಬಿರಗಳು ಜನರ ಆರೋಗ್ಯ ವೃದ್ಧಿಗೆ ವರದಾನವಾಗಿದೆ ಎಂದರು.
ಅಧಿಕಾರಿ ಆನಂದ್ ಮಾತನಾಡಿ, ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬೇಕು. ಯಾವುದೇ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಈ ಶಿಬಿರಗಳು ಸಹಾಯ ಮಾಡುತ್ತವೆ. ಇದರಿಂದ ಮುಂದಾಗಬಹುದಾದ ದೊಡ್ಡ ತೊಂದರೆ ತಪ್ಪಿಸಬಹುದು ಎಂದರು.
ಶಿಬಿರದಲ್ಲಿ ಅಹಿಂದ ಜಿಲ್ಲಾ ಅಧ್ಯಕ್ಷ ಎಸ್.ಕೆ. ಜಯಣ್ಣ, ಎಸ್. ಮಂಜುನಾಥ, ಡಾ. ಯೋಗೇಶ್, ಡಾ. ಅಕ್ಷಯ್, ಡಾ. ವಿಖ್ಯಾತ್, ಡಾ. ವಾಣಿಶ್ರೀ, ಡಾ. ನಮ್ರತಾ, ಸುರೇಶ್, ಚಂದ್ರು, ಗ್ರಾ.ಪಂ. ಕಾರ್ಯದರ್ಶಿ ಚಿನ್ನಪ್ಪಯ್ಯ, ಕರ ವಸೂಲಿಗಾರ ಸುಬ್ರಮಣಿ, ರಾಧಾಕೃಷ್ಣ, ಡಿಇಒ ಚಂದ್ರಪ್ಪ, ಎಲ್. ಮಧುಶೇಖರ್, ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.