ADVERTISEMENT

ಮಾಲೂರು: ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ‌ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:55 IST
Last Updated 15 ಆಗಸ್ಟ್ 2025, 5:55 IST
ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಾಪಾಡಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ಶಿರಸ್ತೆದಾರ್ ಅವರಿಗೆ ಮನವಿ ಸಲ್ಲಿಸಿದರು 
ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಾಪಾಡಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ಶಿರಸ್ತೆದಾರ್ ಅವರಿಗೆ ಮನವಿ ಸಲ್ಲಿಸಿದರು    

ಮಾಲೂರು: ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಾಪಾಡಬೇಕು. ಜೊತೆಗೆ ಪ್ರವಾಸಿ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.

ಕನ್ನಡಿಗರ ಮನಗೆದ್ದ ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಚಿತ್ರಗಳ ಮೂಲಕ ದೇಶಾದ್ಯಂತ ಪ್ರಖ್ಯಾತಿಯಾಗಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಕೆಲವರು ತಮ್ಮ ಭೂಮಿಯೆಂದು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಅಭಿಮಾನಿಗಳಿಗೆ ನೋವು ತಂದಿದೆ ಎಂದು ಕಿಡಿಕಾರಿದರು.

ನಂತರ ಶಿರಸ್ತೆದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಹನುಮಂತಯ್ಯ, ವಿನಯ್ ಕುಮಾರ್, ಸುರೇಶ್, ಕೆ.ವೇಣು, ಸ್ವಾಮಿ, ಚಿಕ್ಕಾಪುರ ನಾರಾಯಣಸ್ವಾಮಿ, ಶಿವಯ್ಯ, ದಯಾನಂದ್, ನಾಣಿ, ರಾಜು, ಆಟೊ ಶ್ರೀನಿವಾಸ್, ಶ್ರೀಕಾಂತ್, ಪ್ರೇಮ್ ಕುಮಾರ್, ಎಸ್.ಎಂ.ವೆಂಕಟೇಶ್, ಸುದೀಪ್, ಅಶೋಕ್, ಮುನಿರಾಜು, ವಾಸು, ಜ್ವಾಲಾಮುಖಿ ಸತೀಶ್, ವಿ.ಶ್ರೀನಿವಾಸ್, ಶಿವಯ್ಯ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.