ADVERTISEMENT

ದ್ರೌಪತಾಂಭ ಮೂಲ ವಿಗ್ರಹ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:27 IST
Last Updated 5 ಮೇ 2022, 2:27 IST
ಬಂಗಾರಪೇಟೆಯ ಧರ್ಮರಾಯಸ್ವಾಮಿ ದೇಗುಲದಲ್ಲಿ ದ್ರೌಪತಾಂಭ ಮೂಲ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು
ಬಂಗಾರಪೇಟೆಯ ಧರ್ಮರಾಯಸ್ವಾಮಿ ದೇಗುಲದಲ್ಲಿ ದ್ರೌಪತಾಂಭ ಮೂಲ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು   

ಬಂಗಾರಪೇಟೆ: ಪಟ್ಟಣದ ಧರ್ಮರಾಯಸ್ವಾಮಿ ದೇಗುಲದಲ್ಲಿ ದ್ರೌಪತಾಂಭ ಮೂಲ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ದ್ರೌಪತಾಂಭ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಪ್ರಾಣ ಪ್ರತಿಷ್ಠಾಪನೆ, ಅಷ್ಟಬಂಧನ, ಕಳಶ ಪೂಜೆ, ಮೂಲ ಹೋಮಗಳು, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಗೋಮುಖ ದರ್ಶನ, ಅಷ್ಟಮಾನ ಸೇವೆ ನಡೆಯಿತು.

ದೇಗುಲಕ್ಕೆ ಭೇಟಿ ನೀಡಿದ್ದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ದ್ರೌಪತಾಂಭ ದೇವಿ ವಿಗ್ರಹ ಪ್ರತಿಷ್ಠಾಪನೆಯು ಹಲವು ವರ್ಷಗಳ ಕನಸು. ದೇವಿಯ ಕರಗ ದೇವಸ್ಥಾನವು ನೂರು ವರ್ಷ ಇತಿಹಾಸ ಹೊಂದಿದೆ. ಆದರೆ, ದೇಗುಲದಲ್ಲಿ ಮೂಲ ವಿಗ್ರಹ ಇಲ್ಲ ಎನ್ನುವ ಕೊರಗು ಇತ್ತು. ವಹ್ನಿಕುಲ ಸಮುದಾಯದ ಎಲ್ಲಾ ಮುಖಂಡರು ಸೇರಿ ಮೂಲ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದರು.

ADVERTISEMENT

ದ್ರೌಪತಾಂಬ, ಧರ್ಮರಾಯಸ್ವಾಮಿ ಹಾಗೂ ರಣಬೀರಮ್ಮ ದೇಗುಲದಲ್ಲಿ ಶತಮಾನದಿಂದ ವಹ್ನಿಕುಲ ಸಮುದಾಯವು ಕರಗ ಮಹೋತ್ಸವ ಆಚರಿಸುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು, ಕೆ. ಚಂದ್ರಾರೆಡ್ಡಿ, ಗೌಡರಾದ ಎ. ಜಯರಾಂ, ಯಜಮಾನ ತಿಮ್ಮರಾಯಪ್ಪ, ಅಧ್ಯಕ್ಷ ಸಿ.ಆರ್. ಮೂರ್ತಿ, ಚಿನ್ನ ವೆಂಕಟೇಶ್, ಕುಮರೇಶ್ ಗೋಪಾಲ್, ಬಿ.ಎಂ. ಶ್ರೀನಿವಾಸ್, ಬಿ.ಆರ್.ಜಿ. ಮುರುಗೇಶ್, ಪೆರುಮಾಳಪ್ಪ, ಕಾರಹಳ್ಳಿ ಗೌಡ ಮುನಿಕೃಷ್ಣ, ಯಜಮಾನ ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.