ADVERTISEMENT

ಕೃಷಿ ಸಮೀಕ್ಷೆ ತರಬೇತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:06 IST
Last Updated 17 ನವೆಂಬರ್ 2022, 6:06 IST

ಮುಳಬಾಗಿಲು: ಕೃಷಿ ಸಮೀಕ್ಷೆ ಆಧಾರದ ಮೇಲೆ ಸರ್ಕಾರದ ಯೋಜನೆಗಳು ರೂಪುಗೊಳ್ಳುತ್ತವೆ. ಹಾಗಾಗಿ, ಕಂದಾಯ ಇಲಾಖೆ ನೌಕರರು ಮೊಬೈಲ್ ಆ್ಯಪ್‌ ಮೂಲಕ ನಿಖರವಾದ ಮಾಹಿತಿ ಸಂಗ್ರಹಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ಮೊಬೈಲ್ ಆ್ಯಪ್‌ ಮೂಲಕ ಕೃಷಿ ಗಣತಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿ
ದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಡಿ.ಸಿ. ಕೇಶವಮೂರ್ತಿ ಮಾತನಾಡಿ, ಮೊಬೈಲ್ ಬಳಕೆ, ಸಮೀಕ್ಷೆ ಮಾಡುವ ವೇಳೆಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ADVERTISEMENT

ತಹಶೀಲ್ದಾರ್ ಶೋಭಿತಾ, ಸಹಾಯಕ ಸಾಂಖ್ಯಿಕ ನಿರ್ದೇಶಕ ಎಂ. ರವಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಮುನಿಯಪ್ಪ, ಸಾಂಖ್ಯಿಕ ನಿರೀಕ್ಷಕ ಮೊಹಮ್ಮದ್ ಇಸಾಕ್, ವಿ.ಎಸ್. ಕುಮಾರಿ ಸುರೇಖಾ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.