ADVERTISEMENT

ಮುಳಬಾಗಿಲು | ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:29 IST
Last Updated 22 ಜುಲೈ 2024, 15:29 IST
ಮುಳಬಾಗಿಲು ನಗರದ ಮಂಜುನಾಥ ಕಾಲೊನಿ ಬಳಿಯ ಕಾಲೇಶ್ ದರ್ಗಾ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು
ಮುಳಬಾಗಿಲು ನಗರದ ಮಂಜುನಾಥ ಕಾಲೊನಿ ಬಳಿಯ ಕಾಲೇಶ್ ದರ್ಗಾ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು   

ಮುಳಬಾಗಿಲು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಸಂಜೆ ಮಂಜುನಾಥ ಕಾಲೊನಿ ಬಳಿಯ ಕಾಲೇಶ್ ದರ್ಗಾ ಸಮೀಪ ಗಾಂಜಾ ಸಮೇತ ಬಂಧಿಸಿದ್ದಾರೆ.

ಮೂಲತಃ ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ನಿವಾಸಿ, ಪ್ರಸ್ತುತ ಮುಳಬಾಗಿಲಿನ ಶಾಮೀರ್ ಮೊಹಲ್ಲಾದ ವಾಸಿಸುತ್ತಿದ್ದ ಸೈಯದ್ ಸುಲ್ತಾನ್ (25) ಬಂಧಿತ ಆರೋಪಿ.

ಸೈಯದ್ ಸುಲ್ತಾನ್ ಭಾನುವಾರ ಕಾಲೇಶ್ ದರ್ಗಾ ಸಮೀಪ ಸುಮಾರು ₹50 ಸಾವಿರ ಬೆಲೆ ಬಾಳುವ 930 ಗ್ರಾಂ ತೂಕದ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್‌ ಡಿ.ಸಿ.ನಂದಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್ ಎಚ್.ಎಂ.ಶಿವಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಪುಂಗನೂರು ಪಟ್ಟಣದ ಭಗತ್ ಸಿಂಗ್ ಕಾಲೊನಿಯ ಬಾಲಕೃಷ್ಣ ಎಂಬುವವರು ಗಾಂಜಾವನ್ನು ಆರೋಪಿಗೆ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.