ಬೇತಮಂಗಲ: ನಲ್ಲೂರು ಗ್ರಾಮದ ಹೊರ ವಲಯದ ಪಾಲಾರ್ ಕೆರೆಯಲ್ಲಿ ವೃದ್ಧೆಯೊಬ್ಬರ ಮೃತದೇಹ ಕಂಡುಬಂದಿದೆ.
ನಲ್ಲೂರು ಗ್ರಾಮದ ಲಕ್ಷ್ಮಮ್ಮ ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಲಕ್ಷ್ಮಮ್ಮ ಅವರಿಗೆ ವಯಸ್ಸಾಗಿದ್ದು, ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ನಲ್ಲೂರು ಬಳಿಯ ದಡದಲ್ಲಿ ವೃದ್ಧ ಮಹಿಳೆಯ ಮೃತದೇಹ ನೀರಿನಲ್ಲಿ ತೇಲುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಬೇತಮಂಗಲ ಪೊಲೀಸ್ ಠಾಣೆ ಪಿಎಸ್ಐ ಗುರುರಾಜ್ ಚಿಂತಕಲ್, ಮೃತದೇಹ ಹೊರತೆಗೆಯಲು ಕ್ರಮ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.