
ಮಾಲೂರು: ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಲ್ಲಿ ಮತ ಪಡೆದು ಅಧಿಕಾರಕ್ಕೆ ಬರುತ್ತಿರುವ ರಾಜಕೀಯ ಪಕ್ಷಗಳು ಅವರ ಆಶಯ ಈಡೇರಿಸದೆ ಸಾಮಾನ್ಯರಿಗೆ ಅನ್ಯಾಯ ಮಾಡುತ್ತಿವೆ. ಹಾಗಾಗಿ ಈ ವ್ಯವಸ್ಥೆ ನಿಯಂತ್ರಿಸಿ ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ರಾಜಕೀಯ ಚಳವಳಿ ಮಾಡಬೇಕಿದೆ ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ನಡೆದ ಸಮಾನತೆ ಸಭೆಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ತತ್ವ, ಆಶಯ ಮತ್ತು ವಿಚಾರಗಳನ್ನು ಜನತೆಗೆ ತಿಳಿಸಿ ಸಮ ಸಮಾಜದ ನಿರ್ಮಾಣಕ್ಕೆ ಹೋರಾಟ ಮಾಡಬೇಕಿದೆ. ಇದಕ್ಕಾಗಿ ಸಭೆಯಲ್ಲಿ ಪ್ರಮುಖ 10 ಅಂಶಗಳನ್ನು ಚರ್ಚಿಸಲಾಯಿತು ಎಂದರು.
ಎಎಸ್‌ಎಸ್‌ಕೆ ಜಿಲ್ಲಾಧ್ಯಕ್ಷ ಕಾಂತರಾಜ್, ಕಲ್ಕೆರೆ ಮುನಿರಾಜು, ಹುಲಿಮಂಗಲ ನವೀನ್, ಶ್ರೀನಿಧಿ ಶ್ರೀನಿವಾಸ್, ಶೇಷಪ್ಪ, ತಿಮ್ಮರಾಯಪ್ಪ, ಮಧುಚಂದ್ರ, ವೀಣಾ, ಆಯೂಬ್ ಖಾನ್, ಮುರಳಿ ಮೋಹನ್, ಮಡಿವಾಳ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.