
ಶ್ರೀನಿವಾಸಪುರ: ಅರಣ್ಯ ಇಲಾಖೆಯು ರೈತರ ಭೂಮಿ ಕಿತ್ತುಕೊಂಡರೆ ನಾವು ಬೀದಿಗೆ ಬರುತ್ತೇವೆ. ರೈತರ ಸಮಸ್ಯೆಯನ್ನ ಆಲಿಸಿ, ಈಗಾಗಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ರೈತರ ಸಮಸ್ಯೆಗಳ ಆಲಿಸಿ ಮಾತನಾಡಿದರು.
ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ. ತಮಗೆ ತೊಂದರೆಯಾದರೆ ನಾವು ಇಲ್ಲಿಗೆ ಬರುತ್ತೇವೆ ಎಂದು ಆಶ್ವಾಸನೆ ನೀಡಿದರು.
ಇಡೀ ರಾಜ್ಯದ ಸಮಸ್ಯೆ ಇದಾಗಿದ್ದು, ಈಗಾಗಲೇ ರೈತರ ಭೂಮಿಯನ್ನು ಅರಣ್ಯ ಇಲಾಖೆ ಸಿಮೆಂಟ್ ದಿಂಬುಗಳನ್ನು ನಾಟಿ ಮಾಡಿರುವ ಬಗ್ಗೆ ರೈತರು ಮಾಹಿತಿ ನೀಡಿದರು. ಆಗ ಶಾಸಕರು ಅದನ್ನು ಕಾಲಕ್ರಮೇಣ ತೆಗೆಯಿರಿ ಎಂದು ಸಲಹೆ
ನೀಡಿದರು.
ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಲಕ್ಷಮಣರೆಡ್ಡಿ, ಡಿಎಸ್‍ಆರ್ ಶ್ರೀನಾಥರೆಡ್ಡಿ, ಆರಿಕುಂಟೆ ವೆಂಕಟರೆಡ್ಡಿ, ಡಿ.ವಿ.ಶ್ರೀನಿವಾಸರೆಡ್ಡಿ, ಬೈರೆಡ್ಡಿ, ಯಶ್ವವಂತ್, ಮನು, ಡಿ.ಎಲ್.ವೆಂಕಟರೆಡ್ಡಿ, ಮನೋಹರ್, ನಾರಾಯಣಸ್ವಾಮಿ, ಶಾಂತಮ್ಮ, ಲಾವಣ್ಯ, ರಾಮಲಕ್ಷ್ಮಮ್ಮ, ಲಕ್ಷ್ಮಿದೇವಮ್ಮ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.