ADVERTISEMENT

ಕೋಲಾರ | ಅರಣ್ಯ ಇಲಾಖೆ ಹುತಾತ್ಮರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:03 IST
Last Updated 13 ಸೆಪ್ಟೆಂಬರ್ 2025, 6:03 IST
ಕೋಲಾರದಲ್ಲಿ ಅರಣ್ಯ ಇಲಾಖೆಯ ಹುತಾತ್ಮರಿಗೆ ಗಣ್ಯರು ನಮನ ಸಲ್ಲಿಸಿದರು. ‌ಜಿ.ಎ.ಮಂಜುನಾಥ್, ಬಿ.ಎಸ್.ಜಯಶ್ರೀ, ನಟೇಶ್‌ ಆರ್‌., ಎಂ.ಆರ್‌.ರವಿ, ನಿಖಿಲ್‌ ಬಿ., ಸರೀನಾ ಸಿಕ್ಕಲಿಗಾರ್‌, ಎಚ್.ಎ.ಆನಂದ್, ಡಾ.ಜಿ.ಶ್ರೀನಿವಾಸ್‌, ಪ್ರೇಮಾ ಹಾಗೂ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಅರಣ್ಯ ಇಲಾಖೆಯ ಹುತಾತ್ಮರಿಗೆ ಗಣ್ಯರು ನಮನ ಸಲ್ಲಿಸಿದರು. ‌ಜಿ.ಎ.ಮಂಜುನಾಥ್, ಬಿ.ಎಸ್.ಜಯಶ್ರೀ, ನಟೇಶ್‌ ಆರ್‌., ಎಂ.ಆರ್‌.ರವಿ, ನಿಖಿಲ್‌ ಬಿ., ಸರೀನಾ ಸಿಕ್ಕಲಿಗಾರ್‌, ಎಚ್.ಎ.ಆನಂದ್, ಡಾ.ಜಿ.ಶ್ರೀನಿವಾಸ್‌, ಪ್ರೇಮಾ ಹಾಗೂ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು    

ಕೋಲಾರ: ನಗರದ ಹೊರವಲಯದ ಕೋಲಾರ ಅರಣ್ಯ ವಿಭಾಗ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಿತು.

ಗಣ್ಯರು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಪೊಲೀಸ್ ತಂಡದಿಂದ ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಅರಣ್ಯಾಧಿಕಾರಿ, ಸಿಬ್ಬಂದಿಯ ತ್ಯಾಗ ಸ್ಮರಿಸಿದರು.

ಹುತಾತ್ಮ ಅಧಿಕಾರಿ, ಸಿಬ್ಬಂದಿಯ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಲು ಆಡಳಿತ ಸಂಸ್ಥೆಗಳು ಮನಸ್ಸು ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಎ.ಮಂಜುನಾಥ ತಿಳಿಸಿದರು.

ADVERTISEMENT

ಹುತಾತ್ಮರಾದ ಅಧಿಕಾರಗಳ ಕಾರ್ಯವೈಖರಿಯನ್ನು ಗಣ್ಯರು ಪ್ರಶಂಸಿಸಿದರು. 2 ನಿಮಿಷ ಮೌನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್‌ ಆರ್., ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್‌, ಡಿಸಿಎಫ್‌ ಸರೀನಾ ಸಿಕ್ಕಲಿಗಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎ.ಆನಂದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.