ADVERTISEMENT

ಕೆಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ: ಶಾಸಕ‌ ಸಮೃದ್ಧಿ ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:03 IST
Last Updated 9 ಮೇ 2025, 14:03 IST
ಮುಳಬಾಗಿಲು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.
ಮುಳಬಾಗಿಲು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.   

ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಉಚಿತ ತರಬೇತಿ ಆರಂಭಿಸಲಾಗುವುದು ಎಂದು ಶಾಸಕ‌ ಸಮೃದ್ಧಿ ಮಂಜುನಾಥ್ ಹೇಳಿದರು.

ನಗರದ ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜಿನ ಕನಿಷ್ಠ ಐದು ಮಂದಿ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆದು ನಾಗರಿಕ ಸೇವಾ ಹುದ್ದೆಗಳಿಗೆ ನೇಮಕವಾಗಬೇಕು. ಬೆಂಗಳೂರಿನಿಂದ ಉತ್ತಮ ತರಬೇತುದಾರರನ್ನು ಕರೆಸಿ ಕಾಲೇಜಿನಲ್ಲಿ ಮುಂದಿನ ತಿಂಗಳಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಕಾಲೇಜಿನಲ್ಲಿ ಕ್ಯಾಂಟೀನ್ ಪ್ರಾರಂಭಿಸಲಾಗಿದೆ, ಅತ್ಯಾಧುನಿಕ ಸಭಾಂಗಣ, ₹6.5 ಕೋಟಿ ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಬದ್ಧ ಎಂದರು.

ತಹಶೀಲ್ದಾರ್ ವಿ. ಗೀತಾ ಮಾತನಾಡಿ, ವಿದ್ಯಾರ್ಥಿಗಳು ಭವ್ಯವಾದ ಕನಸು ಕಟ್ಟಿಕೊಂಡು ಅದರತ್ತ ಕಾರ್ಯೋನ್ಮುಖವಾಗಬೇಕು. ಉಜ್ವಲವಾದ ಬದುಕನ್ನು ರೂಪಿಸಿಕೊಳ್ಳಬೇಕು. ಗುರಿಯಿಲ್ಲದೆ ಏನನ್ನೂ ಸಾಧಿಸಲಾಗದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಿಎಸ್‌ಡಿ ಪದವಿ ಪಡೆದವರನ್ನು ಸತ್ಕರಿಸಲಾಯಿತು. ತಹಶೀಲ್ದಾರ್ ವಿ. ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ, ನಗರಸಭೆ ಪೌರಾಯುಕ್ತ ವಿ.ಶ್ರೀಧರ್, ನಗರಸಭೆ ಸದಸ್ಯರಾದ ಪ್ರಸಾದ್, ರಾಜಶೇಖರ್, ಗುತ್ತಿಗೆದಾರ ಸಂತೋಷ್, ಡಾ.ಎಂ ಕೃಷ್ಣಪ್ಪ, ಟಿ.ಎಸ್ ಶ್ರೀನಿವಾಸ್, ಎಂ.ಎನ್.ಮೂರ್ತಿ, ಮೋಹನ ರೆಡ್ಡಿ, ಎಲ್.ಸೀನಪ್ಪ, ಲಾರೆನ್ಸ್ ಪ್ರಸನ್ನ,ಶಶಿಕಳ, ಉಮ, ವಸುಂದರ, ಶ್ರೀಧರ್, ಡಾ.ನಳಿನಿ, ಸರಿತಾ ಕುಮಾರಿ, ಜಿ.ರವಿ, ಸುಬ್ರಮಣಿ, ವೆಂಕಟೇಶ್, ಮಂಜುನಾಥ ಸ್ವಾಮಿ, ಅಲ್ಲಾ ಬಕಾಶ್, ನಾಗ, ವೆಂಕಟೇಶಪ್ಪ, ರಾಷ್ಟ್ರ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಮುನಿರೆಡ್ಡಿ, ಈನೆಲ ಈಜಲ ವೆಂಕಟಾಚಲಪತಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.