
ಟೇಕಲ್ (ಮಾಲೂರು): ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗಾಂಧಿ ಗ್ರಾಮಸೌಧ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಈ ವೇಳೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ತಾಲ್ಲೂಕನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲು ವಿವಿಧ ಇಲಾಖೆಗಳಿಂದ ಹಣ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡಲು ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮಾರ್ಚ್ 31 ರಂದು ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ಕೆ.ಜಿ.ಹಳ್ಳಿಯ ಗ್ರಾಮ ಪಂಚಾಯಿತಿಯವರು ಒಗ್ಗಟ್ಟಿನಿಂದ ಗಾಂಧಿ ಗ್ರಾಮಸೌಧ ಕಟ್ಟಿದ್ದಾರೆ. ಈ ಕಚೇರಿ ಪೀಠೋಪಕರಣಕ್ಕಾಗಿ ವಿಧಾನಪರಿಷತ್ ಅನುದಾನದಲ್ಲಿ ₹5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ.ಮುರುಗೇಶ, ಉಪಾಧ್ಯಕ್ಷೆ ಮಮತಾ ಶಶಿಧರ, ರಮೇಶಗೌಡ, ಎಚ್.ವಿ.ವಿನೋದ್‌ಗೌಡ, ದಿನ್ನಹಳ್ಳಿ ರಮೇಶ್, ಹನುಮಂತಪ್ಪ, ತಿಮ್ಮರಾಯಪ್ಪ, ವೈ.ಆರ್.ಸತೀಶ್ ರಾಜಣ್ಣ, ಕೆ.ಎಸ್.ವೆಂಕಟೇಶ್, ಪ್ರಗತಿ ಶ್ರೀನಿವಾಸ್, ಬಿ.ಜಿ.ಸತೀಶ್‌ಬಾಬು, ಎ.ಕೆ.ವೆಂಕಟೇಶ, ವೆಂಕಟೇಶ, ಸವಿತಾ.ಎಂ, ಡಿ.ಆರ್.ರವೀಂದ್ರ, ಎಸ್.ಜಿ.ರಾಮಮೂರ್ತಿ, ಮಂಜುಳ ಪ್ರಕಾಶ್, ವೇದಾವತಿ ನಾರಾಯಣಸ್ವಾಮಿ, ಶಂಕರಾಚಾರಿ, ಸೋಮಶೇಖರ್, ಸರಿತಾ ಪ್ರಶಾಂತ್, ಶ್ವೇತಾ.ಸಿ.ಎನ್, ಮುನಿರತ್ನಮ್ಮ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.