ADVERTISEMENT

ಮತದಾರರ ನೋಂದಣಿ; ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:11 IST
Last Updated 8 ನವೆಂಬರ್ 2019, 10:11 IST
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್‌.ಲೋಕೇಶ್‌ ಅವರನ್ನು ಎಸಿ ರಘುನಂದನ್ ಅಭಿನಂದಿಸಿದರು
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್‌.ಲೋಕೇಶ್‌ ಅವರನ್ನು ಎಸಿ ರಘುನಂದನ್ ಅಭಿನಂದಿಸಿದರು   

ಚಿಂತಾಮಣಿ: ಕರ್ನಾಟಕ ವಿಧಾನ ಪರಿಷತ್ತಿಗೆ ಪದವೀಧರರ ಮತ್ತು ಶಿಕ್ಷಕರ ಮತ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಮತದಾರರ ನೋದಣಿ ಅವಧಿ ನ. 6ರಂದು ಮುಕ್ತಾಯಗೊಂಡಿದ್ದರೂ, ಕರಡುಪಟ್ಟಿಯನ್ನು ಪ್ರಕಟಿಸಿದ ಬಳಿಕ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ವಿಧಾನ ಪರಿಷತ್ತಿನ ಸದಸ್ಯ ತೂಪಲ್ಲಿ ಚೌಡರೆಡ್ಡಿ ಚುನಾವಣೆ ಆಯೋಗಕ್ಕೆ ಪತ್ರ ಬರೆದು ನೋಂದಣಿ ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಚುನಾವಣಾ ಆಯೋಗದ ಸ್ಪಷ್ಟನೆಯಂತೆ ಕರುಡು ಪಟ್ಟಿ ಪ್ರಕಟಣೆಯ ನಂತರ ನ. 23ರಿಂದ ಡಿ. 9ರವರೆಗೂ ಪದವೀಧರರ ಹೆಸರನ್ನು ಸೇರ್ಪಡೆ ಮಾಡಬಹುದು ಎಂದು ತಿಳಿಸಿದೆ.

ADVERTISEMENT

ಡಿ. 30ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಣೆಯ ನಂತರವೂ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ನೋಂದಣಿಗೆ ಅರ್ಜಿಗಳನ್ನು ಸಲ್ಲಿಸಬಹುದು. ನಮೂನೆ 18 ಮತ್ತು ನಮೂನೆ 19ರ ಅರ್ಜಿಗಳನ್ನು ನಿಯಮಾನುಸಾರ ತುಂಬಿ ಸಂಬಂಧಿಸಿದ ಮತದಾನ ಕ್ಷೇತ್ರದ ನೋಂದಣಾಧಿಕಾರಿ / ಸಹಾಯಕ ನೋಂದಣಾಧಿಕಾರಿ ಕಚೇರಿಗಳಲ್ಲಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಹೀಗಾಗಿ ಇನ್ನೂ ನೋಂದಣಿ ಮಾಡಿಸದ ಪದವೀಧರರು ನ. 23ರಿಂದ ಡಿಸೆಂಬರ್ 9ರವರೆಗೆ ಹಾಗೂ ಡಿ. 30ರ ನಂತರವೂ ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಸಬಹುದು ಎಂದು ಚೌಡರೆಡ್ಡಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.