ADVERTISEMENT

ಜೆಡಿಎಸ್ ಮಡಿಲಿಗೆ ಗೌನಿಪಲ್ಲಿ ಗ್ರಾ.ಪಂ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 13:25 IST
Last Updated 9 ಆಗಸ್ಟ್ 2023, 13:25 IST
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಚುನಾಯಿತರಾಗಿದ್ದಾರೆ
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಚುನಾಯಿತರಾಗಿದ್ದಾರೆ   

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಜೆಡಿಎಸ್ ಬೆಂಬಲಿತ ನಾಗರತ್ನಮ್ಮ ರಾಮ್ಮೋಹನ್ ಒಟ್ಟು 23 ಮತಗಳ ಪೈಕಿ 13 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫೌಜಿಯಾ ಖಾನಂ 9 ಮತ ಪಡೆದುಕೊಂಡಿದ್ದಾರೆ. ಜರೀನಾ ತಾಜ್‌ಗೆ ಶೂನ್ಯ ಮತ ಬಂದಿವೆ. ಒಂದು ಮತ ತಿರಸ್ಕೃತಗೊಂಡಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟಲಕ್ಷ್ಮಮ್ಮ ವೆಂಕಟರವಣ 12 ಮತ ಪಡೆದು ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ವೆಂಕಟಲಕ್ಷ್ಮಮ್ಮ ಜಿ.ರಮೇಶ್ 10 ಮತ ಪಡೆದಿದ್ದಾರೆ.

ADVERTISEMENT

ಚುನಾವಣಾಧಿಕಾರಿ ಎನ್.ನಾರಾಯಣಸ್ವಾಮಿ, ಪಿಡಿಒ ಗೌಸ್‌ಸಾಬ್ ಚುನಾಣಾ ಕಾರ್ಯನಿರ್ವಹಿಸಿದರು. ಮುಖಂಡ ಶೇಷಾದ್ರಿ, ಅರುಣ ರವಿಕುಮಾರ್, ಜಿ.ಕೆ.ನಾಗರಾಜ್, ವೆಂಕಟರವಣಪ್ಪ, ಶಂಕರಪ್ಪ, ಶಿವಣ್ಣ, ಜಿ.ಎನ್.ರೆಡ್ಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.