ADVERTISEMENT

ಗ್ರಾಮ ಪಂಚಾಯಿತಿ ನೌಕರರ ಸಭೆ; ಸವಲತ್ತು ವಿತರಣೆಗೆ ವಿಳಂಬ ಸಲ್ಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 14:43 IST
Last Updated 6 ಜನವರಿ 2024, 14:43 IST
ಕೆಜಿಎಫ್‌ ತಾಲ್ಲೂಕು ಕ್ಯಾಸಂಬಳ್ಳಿಯಲ್ಲಿ ಶನಿವಾರ ತಾಲ್ಲೂಕು ಮಟ್ಟದ ಗ್ರಾಮಪಂಚಾಯಿತಿ ನೌಕರರ ಸಭೆ ನಡೆಯಿತು
ಕೆಜಿಎಫ್‌ ತಾಲ್ಲೂಕು ಕ್ಯಾಸಂಬಳ್ಳಿಯಲ್ಲಿ ಶನಿವಾರ ತಾಲ್ಲೂಕು ಮಟ್ಟದ ಗ್ರಾಮಪಂಚಾಯಿತಿ ನೌಕರರ ಸಭೆ ನಡೆಯಿತು   

ಕೆಜಿಎಫ್‌: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸರ್ಕಾರದಿಂದ ಬರಬೇಕಾದ ಎಲ್ಲಾ ಸವಲತ್ತುಗಳನ್ನು ವಿಳಂಬ ಮಾಡದೆ ನೀಡಬೇಕು ಎಂದು ಶನಿವಾರ ಕ್ಯಾಸಂಬಳ್ಳಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಸಭೆಯಲ್ಲಿ ಒತ್ತಾಯ ಮಾಡಲಾಯಿತು.

ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಕೆಲಸ ಕೊಡಬೇಕು ಎಂಬ ಸರ್ಕಾರಿ ಆದೇಶವಾಗಿದೆ. ಅದನ್ನು ಜಾರಿಗೆ ತರಬೇಕು. 2017 ರಕ್ಕೂ ಮುನ್ನ ತಾಲ್ಲೂಕಿನಲ್ಲಿ 246 ಪಂಚಾಯಿತಿ ನೌಕರರು ಇದ್ದರು. ಅವರಲ್ಲಿ ಬಹುತೇಕ ಮಂದಿಗೆ ವಿದ್ಯಾರ್ಹತೆ ಇಲ್ಲ ಎಂದು ಸರ್ಕಾರ ಅರ್ಹತೆಗೆಪರಿಗಣಿಸಿಲ್ಲ. ವಿದ್ಯಾರ್ಥತೆ ಇಲ್ಲದಿದ್ದರೂ ಅನುಭವದ ಮೇಲೆ ಆದ್ಯತೆ ನೀಡಬೇಕು ಎಂದು ಸರ್ಕಾರಿ ಆದೇಶ ಇದೆ. ಅದನ್ನು ಜಾರಿಗೆ ತರಬೇಕು ಎಂದು ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ ಒತ್ತಾಯಿಸಿದರು.

ಎಲ್ಲರಿಗೂ ಸಮವಸ್ತ್ರ ನೀಡಬೇಕು. ಎಲ್ಲಾ ಜಲಗಾರರಿಗೆ ಸೈಕಲ್ ಮತ್ತು ಬ್ಯಾಟರಿ ನೀಡಬೇಕು. 15ನೇ ಹಣಕಾಸು ಯೋಜನೆಯಡಿ ಶೇ 10 ರಷ್ಟು ವಿಶೇಷ ಭತ್ಯೆ ನೀಡಬೇಕು. ಇಪ್ಪತ್ತು ತಿಂಗಳಿಂದ ಬಾಕಿ ಇರುವ ಹಣವನ್ನು ಗ್ರಾಮ ಪಂಚಾಯಿತಿಯಿಂದ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಕೇಶವರಾವ್‌, ಜಯಶಂಕರ್‌, ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.