
ಮುಳಬಾಗಿಲು: ತಾಲ್ಲೂಕಿನ ನಂಗಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಹಾಗೂ ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳ ಕಚೇರಿ ಕಟ್ಟಡ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದೆ. ಸುಮಾರು ಎರಡು ವರ್ಷಗಳಿಂದ ಕಚೇರಿ ವ್ಯವಹಾರ ಬಾಡಿಗೆ ಕಟ್ಟಡದಲ್ಲಿ ನಡೆಸುವಂತಾಗಿದೆ.
ನಗರದ ನಂತರ ಅತಿ ಹೆಚ್ಚು ವ್ಯಾಪಾರ ವಹಿವಾಟು, ಜನಸಂಖ್ಯೆ ಹಾಗೂ ಬಹುತೇಕ ಸರ್ಕಾರಿ ಕಚೇರಿಗಳನ್ನು ಹೊಂದಿರುವ ನಂಗಲಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಅಂಚೆ ಕಚೇರಿ ಹಾಗೂ ಬೆಸ್ಕಾಂ ಕಚೇರಿ ಪಕ್ಕದಲ್ಲಿ ಸುಮಾರು 20 ವರ್ಷಗಳ ಹಿಂದೆಯೇ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ, ಅದು ತೀರಾ ಹಳೆಯದಾದ ಕಾರಣ ಕಟ್ಟಡ ಬಹುತೇಕ ಕುಸಿಯುವ ಹಂತದಲ್ಲಿದೆ.
ಸುಸಜ್ಜಿತವಾಗಿ ಕಾಂಪೌಂಡ್ ಸಮೇತ ನಿರ್ಮಿಸಲಾಗಿದ್ದ ಈ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಉದುರಿ ಹೋಗಿದೆ. ಕೇವಲ ಕಬ್ಬಿಣದ ಕಂಬಿಗಳು ಅಸ್ಥಿಪಂಜರದಂತೆ ತೇಲಿಕೊಂಡಿವೆ. ಎಲ್ಲ ಗೋಡೆಗಳು ಸೀಳಿಕೊಂಡು ಆಗಲೇ ಬೀಳುವ ಸ್ಥಿತಿಯಲ್ಲಿವೆ. ಕಟ್ಟಡದ ಮೇಲೆ ನಾನಾ ಬಗೆಯ ಗಿಡಮರ ಬೆಳೆದು ನಿಂತಿವೆ.
ಎರಡು ವರ್ಷಗಳ ಹಿಂದೆ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಕಚೇರಿ ವ್ಯವಹಾರಗಳಿಗಾಗಿ ಈ ಕಟ್ಟಡವನ್ನು ಬಳಸುತ್ತಿದ್ದರೂ ಚಾವಣಿ ಸಿಮೆಂಟ್ ಹಾಗೂ ಮರಳು ಸದಾ ಕೆಳಗೆ ಉದುರುತ್ತಿದೆ. ಕಚೇರಿ ಒಳಗಿನ ನೆಲಹಾಸಿಗೆ ಸಿಮೆಂಟ್ ಹಾಕಲಾಗಿತ್ತಾದರೂ ಇಡೀ ಸಿಮೆಂಟ್ ಎದ್ದು ಗುಂಡಿಮಯವಾಗಿದೆ. ಕಚೇರಿ ಒಳಗೆ ಆಸನ ಹಾಕಲೂ ಆಗದಂಥ ಪರಿಸ್ಥಿತಿ ಏರ್ಪಟ್ಟಿದೆ.
ಇಡೀ ಕಟ್ಟಡದ ಮರದ ಕಿಟಕಿ, ಬಾಗಿಲು ಮುರಿದು ನಾಶವಾಗಿದ್ದರೆ, ಮರದ ಹಲಗೆ ತುಕ್ಕು ಹಿಡಿದು ನಾಶವಾಗಿವೆ. ಕಚೇರಿ ಯಾವುದೇ ಕಡತ ಕಚೇರಿ ಒಳಗೆ ಇಟ್ಟರೆ ಪುಂಡರ ಪಾಲಾಗುವಂಥ ಸ್ಥಿತಿಗೆ ಕಟ್ಟಡ ತಲುಪಿದೆ.
ಕಾಂಪೌಂಡ್ ಕಬ್ಬಿಣದ ಗೇಟ್ ಬಿಟ್ಟರೆ ಉಳಿದ ಇಡೀ ಕಾಂಪೌಂಡ್ ಸೀಳಿಕೊಂಡು, ಸಿಮೆಂಟ್ ಉದುರಿ ಬೀಳುವ ಹಂತಕ್ಕೆ ತಲುಪಿದೆ. ಅಲ್ಲದೆ, ಕಾಂಪೌಂಡ್ ಒಳಗೆ ಪೊದೆಗಳಂತೆ ಗಿಡಗಂಟಿ ಬೆಳೆದಿದೆ. ಹಾವು ಮತ್ತು ಇತರ ವಿಷಜಂತುಗಳ ತಾಣವಾಗಿದೆ.
ಕಟ್ಟಡದ ಮುಂದೆ ಇರುವ ಚರಂಡಿ ಕಾಲುವೆಯಲ್ಲಿ ಕೊಳಚೆ ಹಾಗೂ ಕಸಕಡ್ಡಿಯಿಂದ ತುಂಬಿದೆ. ಕಾಲಿಡಲೂ ಆಗದಂಥ ವಾತಾವರಣ ನಿರ್ಮಾಣವಾಗಿದೆ. ಕಟ್ಟಡದ ದುರಸ್ತಿ ಅಥವಾ ಜೀರ್ಣೋದ್ಧಾರ ಕುರಿತು ಇಲಾಖೆ ಯಾವುದೇ ಅಧಿಕಾರಿ ಮುಂದಾಗದೆ ಇರುವುದು ಬೇಸರದ ಸಂಗತಿ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.
ಕಟ್ಟಡ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಂಗಲಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದರೆ ಗ್ರಾಮದ ಅಭಿವೃದ್ಧಿಗೂ ನೆರವಾಗಲಿದೆ ಎಂದು ಗ್ರಾಮಸ್ಥ ಗಣೇಶ್ ತಿಳಿಸಿದರು.
ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ ಯಾವುದೇ ಅನುದಾನ ಸಿಕ್ಕಿಲ್ಲ.ಮುಂದೆ ಪರಿಶೀಲಿಸಿ, ಕಟ್ಟಡದ ಕುರಿತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು ಕಂದಾಯ ಅಧಿಕಾರಿಗಳು ತಿಳಿಸಿದರು.
ಮುಳಬಾಗಿಲು: ತಾಲ್ಲೂಕಿನ ನಂಗಲಿಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಹಾಗೂ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕಚೇರಿಯ ಕಟ್ಟಡ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿ ಇದ್ದು ಸುಮಾರು ಎರಡು ವರ್ಷಗಳಿಂದ ಕಚೇರಿ ವ್ಯವಹಾರಗಳನ್ನು ಬಾಡಿಗೆ ಕಟ್ಟಡದಲ್ಲಿ ನಿರ್ಮಿಸುವಂತಾಗಿದೆ.
ಮುಳಬಾಗಿಲು ನಗರದ ನಂತರ ಅತಿಹೆಚ್ಚು ವ್ಯಾಪಾರ ವಹಿವಾಟು, ಜನಸಂಖ್ಯೆ ಹಾಗೂ ಬಹುತೇಕ ಸರ್ಕಾರಿ ಕಚೇರಿಗಳನ್ನು ಹೊಂದಿರುವ ನಂಗಲಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯನ್ನು ಅಂಚೆ ಕಚೇರಿ ಹಾಗೂ ಬೆಸ್ಕಾಂ ಕಚೇರಿಯ ಪಕ್ಕದಲ್ಲಿ ಸುಮಾರು 20 ವರ್ಷಗಳ ಹಿಂದೆಯೇ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಿಸಲಾಗಿದೆ.ಆದಈ ತೀರಾ ಹಳೆಯದಾದ ಕಾರಣದಿಂದ ಕಟ್ಟಡ ಬಹುತೇಕ ಕುಸಿಯುವ ಹಂತದಲ್ಲಿ ಇದೆ.
ಸುಸಜ್ಜಿತವಾದ ಕಟ್ಟಡವನ್ನು ಕಾಂಪೌಂಡ್ ಸಮೇತ ನಿರ್ಮಿಸಲಾಗಿದೆ. ಆದರೆ ಕಟ್ಟಡದ ಮೇಲ್ ಚಾವಣಿ ಸಂಪೂರ್ಣವಾಗಿ ಉದುರಿ ಹೋಗಿದ್ದು ಕೇವಲ ಕಬ್ಬಿಣದ ಕಂಬಿಗಳು ಅಸ್ಥಿ ಪಂಜರದಂತೆ ತೇಲಿಕೊಂಡಿದ್ದರೆ, ಎಲ್ಲಾ ಗೋಡೆಗಳು ಸೀಳಿಕೊಂಡು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಇದೆ.ಕಟ್ಟಡದ ಮೇಲೆ ನಾನಾ ಬಗೆಯ ಗಿಡಗಂಟೆಗಳು ಬೆಳೆದು ನಿಂತಿದ್ದು, ಗಿಡಗಳ ಬೇರುಗಳು ಕಟ್ಟಡದ ಗೋಡೆಗಳ ಇಳಿದು ಇಡೀ ಗೋಡೆಗಳನ್ನೇ ತಳ್ಳುವ ಹಂತಕ್ಕೆ ತಲುಪಿದೆ.
ಎರಡು ವರ್ಷಗಳ ಹಿಂದೆ ಕಟ್ಟಡವನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಕಚೇರಿಯ ವ್ಯವಹಾರಗಳಿಗಾಗಿ ಬಳಸಲಾಗುತ್ತಿದ್ದರೂ ಚಾವಣಿಯ ಸಿಮೆಂಟ್ ಹಾಗೂ ಮರಳು ಸದಾ ಕೆಳಗಡೆಗೆ ಉದುರುತ್ತಾ ಎಲ್ಲರ ತಲೆಗಳ ಮೇಲೆ ದೂಳು ಮುಚ್ಚಿಕೊಳ್ಳುವಂತಾಗುತಿತ್ತು. ಕಚೇರಿಯ ಒಳಗಿನ ನೆಲಹಾಸಿಗೆ ಸಿಮೆಂಟ್ ಹಾಕಲಾಗಿತ್ತಾದರೂ ಇಡೀ ಸಿಮೆಂಟ್ ಎದ್ದು ಗುಂಡಿಮಯವಾಗಿತ್ತು. ಹೀಗಾಗಿ ಕಚೇರಿಯ ಒಳಗೆ ಚೇರುಗಳನ್ನು ಹಾಕಲೂ ಆಗಲಾರದಂತಬ ಪರಸ್ಥಿತಿ ಏರ್ಪಟ್ಟಿತ್ತು.ಅದೂ ಸಾಲದೆಂಬಂತೆ ಗೋಡೆಗಳ ಸಿಮೆಂಟ್ ಸಹ ಉದುರುತ್ತಾ ಕೇವಲ ಮಣ್ಣಿನ ಗೋಡೆಗಳಂತೆ ನಿಂತಿದೆ.
ಇನ್ನು ಕಚೇರಿಯ ಅಥವಾ ಇಡೀ ಕಟ್ಟಡದ ಮರದ ಕಿಟಕಿ ಬಾಗಿಲುಗಳು ಮುರಿದು ನಾಶವಾಗಿದ್ದರೆ, ಅಲ್ಪಸ್ವಲ್ಪ ಇದ್ದ ಮರದ ಹಲಗೆಗಳು ತುಕ್ಕು ಹಿಡಿದು ನಾಶವಾಗಿದೆ.ಹೀಗಾಗಿ ಕಚೇರಿಯ ಯಾವುದೇ ಕಡತಗಳನ್ನು ಕಚೇರಿಯ ಒಳಗೆ ಇಟ್ಟರೆ ಪುಂಡ ಪೋಕರಿಗಳ ಪಾಲಾಗುವಂತಹ ಸ್ಥಿತಿಗೆ ಕಟ್ಟಡ ತಲುಪಿದೆ.
ಕಾಂಪೌಂಡಿನ ಕಬ್ಬಿಣದ ಗೇಟು ಬಿಟ್ಟರೆ ಉಳಿದ ಇಡೀ ಕಾಂಪೌಂಡ್ ಸೀಳಿಕೊಂಡು, ಸಿಮೆಂಟ್ ಉದುರಿ ಬೀಳುವ ಹಂತಕ್ಕೆ ತಲುಪಿರುವುದಲ್ಲದೆ, ಕಾಂಪೌಂಡ್ ಒಳಗೆ ಪೊದೆಗಳಂತೆ ಗಿಡಗಂಟೆಗಳು ಬೆಳೆದಿದ್ದು ಹಾವು ಮತ್ತಿತರರ ವಿಷ ಜಂತುಗಳ ತಾಣವಾಗಿದೆ.
ಕಟ್ಟಡದ ಮುಂದೆ ಇರುವ ಚರಂಡಿ ಕಾಲುವೆಯಲ್ಲೂ ಸಹ ಕೊಳಚೆ ಹಾಗೂ ಕಸ ಕಡ್ಡಿಯಿಂದ ತುಂಬಿದ್ದು ಕಾಲಿಡಲೂ ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದರೂ ಕಟ್ಟಡದ ದುರಸ್ತಿ ಅಥವಾ ಜೀರ್ಣೋದ್ಧಾರದ ಕುರಿತು ಇಲಾಖೆಯ ಯಾವುದೇ ಅಧಿಕಾರಿ ಮುಂದಾಗದೆ ಇರುವುದು ಬೇಸರದ ಸಂಗತಿ ಎಂದು ಸ್ಥಳೀಯ ವಾಸಿಗಳು ತಿಳಿಸಿದರು.
ಕಟ್ಟಡ ನಿರ್ಮಾಣ ಮಾಡಿ ದಶಕಗಳೇ ಕಳೆದಿದೆ.ಹೀಗಾಗಿ ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.ಹೀಗಾಗಿ ವೇಗವಾಗಿ ಅಭಿವೃದ್ಧಿ ಆಗುತ್ತಿರುವ ನಂಗಲಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದರೆ ಗ್ರಾಮದ ಅಭಿವೃದ್ಧಿಗೂ ನೆರವಾಗಲಿದೆ ಎಂದು ಗ್ರಾಮಸ್ಥ ಗಣೇಶ್ ತಿಳಿಸಿದರು.
ಈ ಸಂಭಂದ ಕಂದಾಯ ಅಧಿಕಾರಿಗಳನ್ನು ವಿಚಾರಿಸಿದರೆ ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ ಯಾವುದೇ ಅನುದಾನವಾಗಲಿ ಇಲ್ಲ. ಹೀಗಾಗಿ ಮುಂದೆ ಪರಿಶೀಲಿಸಿ ಕಟ್ಟಡದ ಕುರಿತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.