ADVERTISEMENT

ಕೋಲಾರ ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ: ರಸ್ತೆ, ಹೊಲ, ಶಾಲೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 6:24 IST
Last Updated 3 ಆಗಸ್ಟ್ 2022, 6:24 IST
   

ಕೋಲಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ರಸ್ತೆ, ಹೊಲ ಗದ್ದೆ, ಶಾಲೆ ಜಲಾವೃತಗೊಂಡಿವೆ.

ರಾತ್ರಿ ಸುರಿದ ಭಾರಿ ಮಳೆಗೆ ಕೋಲಾರದಿಂದ ಅರಹಳ್ಳಿಗೆ ತೆರಳುವ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿದಿದೆ. ಅರಹಳ್ಳಿ ಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ಸುತ್ತಲಿನ ಜಮೀನುಗಳು ಮುಳುಗಿವೆ. ರಾಗಿ ಬಿತ್ತನೆ ಮಾಡಿದ್ದು, ನೀರಿನಲ್ಲಿ ತೊಳೆದು ಹೋಗಿದೆ. ಅವರೆ, ತೊಗರಿ ನಾಶವಾಗಿದೆ. ಕ್ಯಾಪ್ಸಿಕಂ, ಟೊಮೆಟೊ ಬೆಳೆಗೂ ಹಾನಿ ಉಂಟಾಗಿದೆ.

ಆಜಾದ್‌ ನಗರದ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಜಲಾವೃತಗೊಂಡಿದ್ದು, ರಜೆ ಘೋಷಿಸಲಾಗಿದೆ. ಈ ಭಾಗದ ಮನೆಗಳಿಗೂ ನೀರು ನುಗ್ಗಿದೆ.

ನಗರದ ಕೋಲಾರಮ್ಮ ಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಕೋಲಾರ ನಗರ ಹಾಗೂ ಕೋಡಿ ಕಣ್ಣೂರು ಮುಖ್ಯ ರಸ್ತೆ ಜಲಾವೃತಗೊಂಡಿದೆ. ಶಾಲೆ ವಾಹನಗಳು ಬರಲು ಸಾಧ್ಯವಾಗಿಲ್ಲ. ಚರಂಡಿ, ಕಾಲುವೆ, ರಾಜಕಾಲುವೆ ಉಕ್ಕಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.