ಉಡುಪಿಯಲ್ಲಿ ಮಳೆ
– ಪ್ರಜಾವಾಣಿ ಚಿತ್ರ
ಕೋಲಾರ: ನಗರ ಹಾಗೂ ಗ್ರಾಮಾಂತರ ಭಾಗದ ವಿವಿಧೆಡೆ ಶನಿವಾರ ರಾತ್ರಿ ಬಿರುಸಿನ ಮಳೆಯಾಗಿದೆ.
ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಆದರೆ, ಸಂಜೆ ವೇಳೆಗೆ ಮೋಡ ಕವಿಯಿತು. ಸುಮಾರು 7 ಗಂಟೆಗೆ ಮಳೆ ಆರಂಭವಾಯಿತು. ಜೊತೆಗೆ ಗುಡುಗು ಸಿಡಿಲಿನ ಅಬ್ಬರವೂ ಇತ್ತು. ತಡ ರಾತ್ರಿವರೆಗೆ ಮಳೆ ಬರುತ್ತಲೇ ಇತ್ತು.
ಹಲವು ಬಡಾವಣೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿದ್ದು, ಕೆಸರು ಗದ್ದೆಯಾಗಿವೆ. ಪ್ರಮುಖ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು, ವಾಹನ ಸವಾರರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.