ಕೋಲಾರ: ‘ಹಿಂದಿ ನಮ್ಮ ರಾಷ್ಟ್ರ ಭಾಷೆ. ರಾಜ್ಯ ಸರ್ಕಾರ ಈ ಭಾಷೆ ಕೈಬಿಟ್ಟರೆ ಹೋರಾಟ ಮಾಡುತ್ತೇನೆ’ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.
ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಎಚ್ಚೆತ್ತುಕೊಂಡ ಅವರು ಗುರುವಾರ ಕ್ಷಮೆ ಯಾಚಿಸಿದ್ದಾರೆ.
‘ನಾನೂ ಕರ್ನಾಟಕದವನು. ಕನ್ನಡಿಗ, ಕನ್ನಡ ಪ್ರೇಮಿ. ಹಿಂದಿ ಶಿಕ್ಷಕರಿಗೆ ಅನ್ಯಾಯ ಆಗಬಾರೆಂಬುದು ನನ್ನ ಕಾಳಜಿ ಆಗಿತ್ತು. ಹಿಂದೆ ಹೇರಿಕೆ ಬೆಂಬಲಿಸಿ ಈ ಹೇಳಿಕೆ ನೀಡಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಿನ್ನೆಲೆ: ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರದಲ್ಲಿ ಮಂಗಳವಾರ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ಹಿಂದಿ ನಮ್ಮ ರಾಷ್ಟ್ರ ಭಾಷೆ. ಹಿಂದಿ ಭಾಷೆ ಕೈಬಿಟ್ಟರೆ ಹೋರಾಟ ಮಾಡುತ್ತೇನೆ‘ ಎಂದಿದ್ದರು.
‘ಈ ಭಾಷೆ ಕೈಬಿಟ್ಟರೆ ಮುಂದೆ ಕಷ್ಟವಾಗುತ್ತದೆ. ಬಹುತೇಕ ಸಂಸದರು ಹಿಂದಿ ಮಾತನಾಡಲು ಕಷ್ಟ ಪಡುತ್ತಾರೆ. ಹೀಗಾಗಿ, ಹಿಂದಿ ಬೇಕೇಬೇಕು’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.