ADVERTISEMENT

ಕೋಲಾರ | ಮನೆ ಕುಸಿತ: ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:09 IST
Last Updated 3 ಡಿಸೆಂಬರ್ 2021, 16:09 IST
ಕೋಲಾರ ತಾಲ್ಲೂಕಿನ ಕೆ. ಮಲ್ಲಂಡಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಹಳೆಯ ಮನೆ ಕುಸಿದಿದ್ದು, ವಯೋವೃದ್ಧ ದಂಪತಿ ಮೃತಪಟ್ಟಿದ್ದಾರೆ
ಕೋಲಾರ ತಾಲ್ಲೂಕಿನ ಕೆ. ಮಲ್ಲಂಡಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಹಳೆಯ ಮನೆ ಕುಸಿದಿದ್ದು, ವಯೋವೃದ್ಧ ದಂಪತಿ ಮೃತಪಟ್ಟಿದ್ದಾರೆ   

ಕೋಲಾರ: ತಾಲ್ಲೂಕಿನ ಕೆ. ಮಲ್ಲಂಡಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಹಳೆಯ ಮನೆ ಕುಸಿದು ವಯೋವೃದ್ಧ ದಂಪತಿ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಗ್ರಾಮದ ನಾಗರಾಜಪ್ಪ (65) ಮತ್ತು ಅವರ ಪತ್ನಿ ಲಕ್ಷ್ಮಮ್ಮ (60) ಮೃತಪಟ್ಟವರು. ಅವರ ಸಂಬಂಧಿ ಸೀನಪ್ಪ ಅವರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೂಲಿ ಕಾರ್ಮಿಕರಾದ ನಾಗರಾಜಪ್ಪ ದಂಪತಿ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಶಿಥಿಲಗೊಂಡಿದ್ದ ಆ ಮನೆಯು ರಾತ್ರಿ ಏಕಾಏಕಿ ಕುಸಿದಿದೆ.ಗ್ರಾಮಸ್ಥರ ನೆರವಿನಿಂದ ಸೀನಪ್ಪ ಅವರನ್ನು ರಕ್ಷಿಸಲಾಯಿತು. ಅಂಗವಿಕಲರಾದ ಅವರಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.

ADVERTISEMENT

ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.