ADVERTISEMENT

ಅಕ್ರಮ ಗಾಂಜಾ ಸಾಗಾಟ: 10 ಕೆಜಿ ಒಣ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:54 IST
Last Updated 14 ಜನವರಿ 2026, 7:54 IST
ಬಂಗಾರಪೇಟೆ ನಗರದ ಅಬಕಾರಿ ಪೋಲಿಸ್ ಠಾಣೆಯ ಮುಂಭಾಗ ಆರೋಪಿ ಮತ್ತು ಮಾಲಿನೊಂದಿಗೆ ಅಬಕಾರಿ ಪೊಲೀಸರು
ಬಂಗಾರಪೇಟೆ ನಗರದ ಅಬಕಾರಿ ಪೋಲಿಸ್ ಠಾಣೆಯ ಮುಂಭಾಗ ಆರೋಪಿ ಮತ್ತು ಮಾಲಿನೊಂದಿಗೆ ಅಬಕಾರಿ ಪೊಲೀಸರು   

ಬಂಗಾರಪೇಟೆ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಗಾರಪೇಟೆ-ಕೋಲಾರ ರಸ್ತೆಯ ಪಾಕರಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಬಂಧಿಸಿ, ಸುಮಾರು 10 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಎಲ್.ಆರ್.ನಗರದ ನಿವಾಸಿ ಮೊಹಮ್ಮದ್ ಸಾಹುಲ್ (22) ಬಂಧಿತ ಆರೋಪಿ. 

ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ, ಕೋಲಾರ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಬಂಗಾರಪೇಟೆ ವಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಅರುಣ್ ಕುಮಾರ್, ಉಪನಿರೀಕ್ಷಕರಾದ ಶಿವಾನಂದು ಮತ್ತು ಅನಿಲ್, ಸಿಬ್ಬಂದಿ ಮಂಜುನಾಥ್, ಶಿವಶಂಕರ್, ನವೀನ್ ಮತ್ತು ಭರತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.