ADVERTISEMENT

ರಸ್ತೆ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 5:33 IST
Last Updated 8 ಜನವರಿ 2021, 5:33 IST
ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ನಿವಾಸಿಗಳು
ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ನಿವಾಸಿಗಳು   

ಮುಳಬಾಗಿಲು: ಖಾಸಗಿ ಕಾರ್ಖಾನೆಯವರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ಪರಿಣಾಮ ರಸ್ತೆಯ ಅನುಕೂಲವಿಲ್ಲದಂತಾಗಿದೆ. ಕೂಡಲೇ ರಸ್ತೆಗೆ ಸ್ಥಳ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವೀರಭದ್ರನಗರಕ್ಕೆ ಸೇರಿದ ಕೈಗಾರಿಕಾ ಕ್ಷೇತ್ರದ ನೆರೆಹೊರೆಯ ನಿವಾಸಿಗಳು ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ವೀರಭದ್ರನಗರ ವಾರ್ಡ್‌ಗೆ ಸೇರಿದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಇಪ್ಪತೈದು ವರ್ಷಗಳಿಂದ ವಾಸವಾಗಿರುತ್ತಾರೆ. ಹಲವಾರು ವರ್ಷಗಳಿಂದ ರಸ್ತೆ ಇದ್ದು ಸಾರ್ವಜನಿಕವಾಗಿ ಓಡಾಡುವ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ದೂರಿದರು.

ಈ ರಸ್ತೆ ಬಿಟ್ಟರೆ ಇಲ್ಲಿನ ನಿವಾಸಿಗಳಿಗೆ ಬೇರೆ ರಸ್ತೆಯ ವ್ಯವಸ್ಥೆ ಇರುವುದಿಲ್ಲ. ಕೂಡಲೇ ಅಧಿಕಾರಿಗಳ ಸ್ಥಳ ತೆರವಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಉಪ ತಹಶೀಲ್ದಾರ್ ಕೆ.ಎಲ್. ಜಯರಾಮ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ, ವೀರಭದ್ರನಗರ ನಿವಾಸಿಗಳಾದ ಶಂಕರಪ್ಪ, ರೆಡ್ಡಪ್ಪ, ಡಿಶ್ಮಣಿ, ಜಯರಾಮರೆಡ್ಡಿ, ಶ್ರೀನಿವಾಸ ಗೋಪಿ, ಸರಸ್ಪತಮ್ಮ, ಸುಜಾತಾ, ಮಂಜುಳಮ್ಮ, ಪವಿತ್ರಾ, ಲಲಿತಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.