ADVERTISEMENT

ಜರ್ಮನಿಯ ಕಂಪನಿಯಿಂದ ₹315 ಕೋಟಿ ಹೂಡಿಕೆ, 550 ಉದ್ಯೋಗ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 13:08 IST
Last Updated 20 ಫೆಬ್ರುವರಿ 2025, 13:08 IST
<div class="paragraphs"><p>ಬಾಟ್ಲಿಂಗ್ ಯಂತ್ರಗಳ ತಯಾರಿಕಾ ಘಟಕ ನಿರ್ಮಾಣಕ್ಕೆ&nbsp;ಶಂಕುಸ್ಥಾಪನೆ ನೆರವೇರಿಸಿದ&nbsp;ಸಚಿವ ಎಂ.ಬಿ.ಪಾಟೀಲ</p></div>

ಬಾಟ್ಲಿಂಗ್ ಯಂತ್ರಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ

   

ಕೋಲಾರ: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ₹315 ಕೋಟಿ ಮೊತ್ತದಲ್ಲಿ ಜರ್ಮನಿ ಮೂಲದ ಕ್ರೋನ್ಸ್ ಕಂಪನಿ ಕೈಗೆತ್ತಿಕೊಂಡಿರುವ ಬಾಟ್ಲಿಂಗ್ ಯಂತ್ರಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ಈಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್‌)–ಇನ್ವೆಸ್ಟ್ ಕರ್ನಾಟಕ-25ರ ₹10.27 ಲಕ್ಷ ಕೋಟಿ ಹೂಡಿಕೆ ಗುರಿಯ ಭಾಗವಾಗಿ ಈ ಕಂಪನಿ ಕೂಡ ಇದ್ದು, ಮೊದಲ ಹಂತದಲ್ಲಿ ₹315 ಕೋಟಿ ಹೂಡಿಕೆ ಮಾಡಿ 550 ಉದ್ಯೋಗ ನೀಡಲಿದೆ ಎಂದು ಅವರು ಹೇಳಿದರು.

ADVERTISEMENT

‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ಒಪ್ಪಂದ ಏರ್ಪಡುವ ಮುನ್ನ ಡಿಸೆಂಬರ್‌ನಲ್ಲಿ ಜರ್ಮನಿ ರೋಡ್ ಶೋ ವೇಳೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ್ದೆವು. ಆ ಸಂದರ್ಭದಲ್ಲಿ ನ್ಯೂಟ್ರಾಬ್ಲಿಂಗ್‌ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪೂರ್ವಭಾವಿ ಒಪ್ಪಂದ ಏರ್ಪಟ್ಟಿತ್ತು. ಇದೀಗ ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿದೆ. ಸಮಾವೇಶದಲ್ಲಿ ಏರ್ಪಟ್ಟಿರುವ ಹೂಡಿಕೆ ಒಪ್ಪಂದಗಳನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ಇಳಿಸಲು ಸರ್ಕಾರ ಒತ್ತು ನೀಡಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.