ADVERTISEMENT

ಮಾಲೂರು ಪಿಯು ಕಾಲೇಜು ಆವರಣದಲ್ಲಿ ಐಪಿಎಲ್ ಪಂದ್ಯ ಲೈವ್ ಸ್ಕ್ರೀನಿಂಗ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:34 IST
Last Updated 3 ಜೂನ್ 2025, 14:34 IST
ಮಾಲೂರು ಪಟ್ಟಣದ ಸರ್ಕಾರಿ ಪಿಯು ಕಾಲೇಜು (ಹೋಂಡಾ ಸ್ಟೇಡಿಯಂ) ಆವರಣದಲ್ಲಿ ಆರ್‌ಸಿಬಿ–ಪಂಜಾಬ್ ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಲೈವ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿರುವುದು 
ಮಾಲೂರು ಪಟ್ಟಣದ ಸರ್ಕಾರಿ ಪಿಯು ಕಾಲೇಜು (ಹೋಂಡಾ ಸ್ಟೇಡಿಯಂ) ಆವರಣದಲ್ಲಿ ಆರ್‌ಸಿಬಿ–ಪಂಜಾಬ್ ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಲೈವ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿರುವುದು    

ಮಾಲೂರು: ಇಲ್ಲಿನ ಸರ್ಕಾರಿ ಪಿಯು ಕಾಲೇಜು (ಹೋಂಡಾ ಸ್ಟೇಡಿಯಂ) ಆವರಣದಲ್ಲಿ ಮಾಲೂರಿನಲ್ಲಿರುವ ಆರ್‌ಸಿಬಿ ಅಭಿಮಾನಿಗಳು ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಲೈವ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಸುನೀಲ್ ನಂಜೇಗೌಡ, ‘ಆರ್‌ಸಿಬಿ ಅಭಿಮಾನಿಗಳ ಬಹುದಿನಗಳ ಕನಸು‌ ಇಂದು ನನಸಾಗಲಿದೆ. 18 ವರ್ಷಗಳ ಕಾಯುವಿಕೆಗೆ ಇಂದು ಫಲ ಸಿಗುವ ವಿಶ್ವಾಸವಿದೆ’ ಎಂದು ತಿಳಿಸಿದರು. 

ಆರ್‌ಸಿಬಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಪಟ್ಟಣದ ಯುವ ಜನತೆ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಭಾರಿ ಜನಸಮೂಹ ನೆರೆದಿತ್ತು. ಪ್ರತಿಯೊಂದು ಬಾಲ್‌ ಹಾಕಿದಾಗಲೂ ಸಿಳ್ಳೆ , ಚಪ್ಪಾಳೆ ಹೊಡೆದು ಆನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.