ADVERTISEMENT

ಮಾರುಕಟ್ಟೆಯಾದ ಜೂನಿಯರ್ ಕಾಲೇಜು ಮೈದಾನ

ಕಾಲೇಜು ಮೈದಾನಕ್ಕೆ ಮಾರುಕಟ್ಟೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 14:30 IST
Last Updated 29 ಮಾರ್ಚ್ 2020, 14:30 IST
ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಟಿ.ಚನ್ನಯ್ಯ ಸಂತೇ ಮೈದಾನದ ಮಾರುಕಟ್ಟೆಯನ್ನು ಭಾನುವಾರ ಸ್ಥಳಾಂತರ ಮಾಡಿದ್ದು, ತಹಶೀಲ್ದಾರ್ ಶೋಭಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಟಿ.ಚನ್ನಯ್ಯ ಸಂತೇ ಮೈದಾನದ ಮಾರುಕಟ್ಟೆಯನ್ನು ಭಾನುವಾರ ಸ್ಥಳಾಂತರ ಮಾಡಿದ್ದು, ತಹಶೀಲ್ದಾರ್ ಶೋಭಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.   

ಕೋಲಾರ: ನಗರದ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಇಲ್ಲಿನ ಟಿ.ಚನ್ನಯ್ಯ ಸಂತೇ ಮೈದಾನದಲ್ಲಿ ನಡೆಯುತ್ತಿದ್ದ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವ ಕುರಿತು ಸ್ಥಳೀಯರು ಆತಂಕತಕ್ಕೆ ಒಳಗಾಗಿದ್ದಾರೆ.

ಮಾರುಕಟ್ಟೆಗೆ ತರಕಾರಿ, ಹಣ್ಣು, ಸಾಮಗ್ರಿ ಖರೀದಿಗೆ ಬರುವವರು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿರಲಿಲ್ಲ. ಖರೀದಿಗೆ ಮುಗಿಬಿದ್ದ ಜನ ಖರೀದಿ ವೇಳೆ ಪರಸ್ಪರ ಒಂದು ಮೀಟರ್‌ಗಳಷ್ಟು ಅಂತರ ಕಾಯ್ದುಕೊಳ್ಳುತ್ತಿಲ್ಲ.

ರಾಜ್ಯ ಹಾಗೂ ಅಕ್ಕಪಕ್ಕದ ಜಿಲ್ಲೆಯಲ್ಲಿ ಕೊರೊನ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಮಾರುಕಟ್ಟೆ ಸ್ಥಳಾಂತರ ಮಾಡಲು ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ತೀರ್ಮಾನಕೈಗೊಂಡು ಭಾನುವಾರ ಕಾಲೇಜು ಮೈದಾನಕ್ಕೆ ಸ್ಥಳಾಂತರ ಮಾಡಿದರು.

ADVERTISEMENT

ಮಾರುಕಟ್ಟೆಯಲ್ಲಿ ಜನ ಜಂಗುಳಿ ಉಂಟಾಗುವುದನ್ನು ತಪ್ಪಿಸಲು ಪೊಲೀಸರು ಹರಸಹಾಸ ಮಾಡಿದರು ಜನ ನಿಯಂತ್ರಣಗೊಳ್ಳುತ್ತಿಲ್ಲ. ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಪರಸ್ಪರ ಸಮಾಲೋಚನನೆ ನಡೆಸಿ ಸ್ಥಳಾಂತರ ಮಾಡಿದ್ದಾರೆ.

ಕೊರೊನ ವೈರಸ್ ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿದೆ. ಇದರ ನಡುವೆಯೂ ಸಾರ್ವಜನಿಕರಿಗೆ ಮನೆಗೆ ಬೇಕಾಗಿರುವ ಸಮಾಗ್ರಿಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೂ ಸಹ ಇಲ್ಲಿ ಜನ ತರಕಾರಿ ಖರೀದಿ ವೇಳೆ ಅಂತರ ಕಾಯ್ದುಕೊಳ್ಳುವುದಕ್ಕೆ ಯಾವುದೇ ಗುರುತುಗಳನ್ನು ಮಾಡಿರಲಿಲ್ಲ.ಜನಕ್ಕ ಎಷ್ಟು ಅರಿವು ಮೂಡಿಸಿದರು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಅಧಿಕಾರಿಗಳು ಕಾಲೇಜು ಮೈದಾನದಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳಲು ಜಾಗ ನೀಡಿದ್ದು, ಪ್ರತಿ ದಿನ ಬೆಳಿಗ್ಗೆ 6 ರಿಂದ 9ರತನಕ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಮೈದಾನದಲ್ಲಿ ಯಾವುದೇ ರೀತಿ ಅಹಿತರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು, ಮಾರುಕಟ್ಟೆ ಸ್ಥಳಾಂತರ ಕುರಿತು ತಹಶೀಲ್ದಾರ್ ಶೋಭಿತಾ ವೀಕ್ಷಿಸಿದರು.

‘ತರಕಾರಿ ಖರೀದಿಗೆ ಬರುವ ಸಾರ್ವಜನಿಕರು, ವ್ಯಪಾರಿಗಳು ಯಾರೂ ಮುಖಗವಸು ತೊಟ್ಟಿಲ್ಲ. ಜನ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಜನಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾರುಕಟ್ಟೆಯನ್ನು ತಾತ್ಕಲಿಕವಾಗಿ ಸ್ಥಳಾಂತರ ನಾಡಲಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಕೋರಿದರು.

‘ತರಕಾರಿಯನ್ನು ವ್ಯಾಪಾರಸ್ಥರಿಗೆ ಮನ ಬಂದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ, ಎಪಿಎಂಸಿ ಮಾರುಕಟ್ಟೆಗೆ ಹೊಲಿಕೆ ಮಾಡಿದರೆ ಇಲ್ಲಿ ದರ ಹೆಚ್ಚಾಗಿದೆ. ವ್ಯಾಪಾರಸ್ಥರಿಗೆ ಕೇಳಿದರೆ ಯಾವುದೇ ರೀತಿ ಉತ್ತರ ನೀಡುವುದಿಲ್ಲ’ ಎಂದು ಅರಳೆಪೇಟೆ ನಿವಾಸಿ ಜಗದೀಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.