ADVERTISEMENT

‘ಕಕ್ಷಿದಾರರಿಗೆ ನ್ಯಾಯ ಕೊಡಿಸಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:05 IST
Last Updated 5 ಡಿಸೆಂಬರ್ 2021, 5:05 IST
ಮುಳಬಾಗಿಲು ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆಯನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಈಶ್ವರ್ ಉದ್ಫಾಟಿಸಿದರು. ಎಂ.ಎಸ್. ಶ್ರೀನಿವಾಸರೆಡ್ಡಿ, ಪಿ.ಎಂ. ಸದಾಶಿವಯ್ಯ, ಸುಬ್ರಮಣಿ, ಸಂತೋಷ್‌ ಕುಮಾರ್, ಎನ್. ಪ್ರಭಾಕರ್ ಹಾಜರಿದ್ದರು
ಮುಳಬಾಗಿಲು ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ನಡೆದ ವಕೀಲರ ದಿನಾಚರಣೆಯನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಈಶ್ವರ್ ಉದ್ಫಾಟಿಸಿದರು. ಎಂ.ಎಸ್. ಶ್ರೀನಿವಾಸರೆಡ್ಡಿ, ಪಿ.ಎಂ. ಸದಾಶಿವಯ್ಯ, ಸುಬ್ರಮಣಿ, ಸಂತೋಷ್‌ ಕುಮಾರ್, ಎನ್. ಪ್ರಭಾಕರ್ ಹಾಜರಿದ್ದರು   

ಮುಳಬಾಗಿಲು: ‘ನಂಬಿ ಬರುವ ಕಕ್ಷಿದಾರರಿಗೆ ವಕೀಲರು ನ್ಯಾಯ ಕೊಡಿಸಬೇಕು’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಈಶ್ವರ್ ಹೇಳಿದರು.

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ವಕೀಲರ ಸಂಘದಿಂದಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಫಾಟಿಸಿ ಅವರು ಮಾತನಾಡಿದರು.

ನ್ಯಾಯ ಕೋರಿ ಬರುವ ಕಕ್ಷಿದಾರರನ್ನು ವಕೀಲರು ಕೈಹಿಡಿದು ಕಾಪಾಡಬೇಕು. ಮಾನವೀಯತೆಯ ನೆಲೆಯಲ್ಲಿ ಬಡ ಕಕ್ಷಿದಾರರಿಗೆ ನೆರವಾಗುವ ಮೂಲಕ ಕರಿಕೋಟಿನ ಗೌರವ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ಯಾದವಾಡ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ವೃತ್ತಿ ಗೌರವ ಹೆಚ್ಚುತ್ತದೆ. ಹೊಸದಾಗಿ ಜಾರಿಗೆ ಬರುವ ಕಾನೂನುಗಳನ್ನು ಅಧ್ಯಯನ ಮಾಡಿ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ಪಿ.ಎಂ. ಸದಾಶಿವಯ್ಯ, ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ಸಂತೋಷ್‌ ಕುಮಾರ್, ಎನ್. ಪ್ರಭಾಕರ್, ಡಿ.ವಿ. ಮೋಹನ್‌ ರೆಡ್ಡಿ, ಎನ್. ಶೇಖರ್, ಪಿ. ನಟರಾಜ್, ಗುರುಮೂರ್ತಿ, ಸಿ.ಎಂ. ನಯಾಜ್, ಕೃಷ್ಣಮೂರ್ತಿ, ಕೆ.ಆರ್. ವೇಣುಗೋಪಾಲ್, ಅಲಗನಹಳ್ಳಿ ರಮೇಶ್, ಬಿ. ವೆಂಕಟೇಶ್, ಕವಿತಾ, ವಿ. ಜಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.