ADVERTISEMENT

ಕೆಜಿಎಫ್‌: ಸ್ಮಶಾನದಲ್ಲಿ ದೇವಿ ಪೂಜೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 6:09 IST
Last Updated 20 ಫೆಬ್ರುವರಿ 2023, 6:09 IST
ಕೆಜಿಎಫ್‌ ಚಾಂಪಿಯನ್ ರೀಫ್ಸ್ ಸ್ಮಶಾನದಲ್ಲಿ ಭಾನುವಾರ ನಡೆದ ಸ್ಮಶಾನ ಕೊಳ್ಳೈ ಕಾರ್ಯಕ್ರಮದಲ್ಲಿ ಮದನ್‌ಕುಮಾರ್ ನೃತ್ಯ ಪ್ರದರ್ಶಿಸಿದರು
ಕೆಜಿಎಫ್‌ ಚಾಂಪಿಯನ್ ರೀಫ್ಸ್ ಸ್ಮಶಾನದಲ್ಲಿ ಭಾನುವಾರ ನಡೆದ ಸ್ಮಶಾನ ಕೊಳ್ಳೈ ಕಾರ್ಯಕ್ರಮದಲ್ಲಿ ಮದನ್‌ಕುಮಾರ್ ನೃತ್ಯ ಪ್ರದರ್ಶಿಸಿದರು   

ಕೆಜಿಎಫ್‌: ನಗರದ ಚಾಂಪಿಯನ್ ರೀಫ್ಸ್‌ ಸ್ಮಶಾನದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ಮಶಾನ ಕೊಳ್ಳೈ ಕಾರ್ಯಕ್ರಮ ನಡೆಯಿತು.

ಬಾಲನಾಗಮ್ಮ ದೇವಾಲಯದ ಅರ್ಚಕ ಮದನ್‌ಕುಮಾರ್‌ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಮಶಾನದಲ್ಲಿ ದೇವಿ ಪೂಜೆ ನೆರವೇರಿಸಿದರು. ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಮಂಗಳಮುಖಿ ಉಡುಪನ್ನು ಧರಿಸಿ ನೃತ್ಯ
ಮಾಡಿದರು.

ಮೇಕೆ ಮತ್ತು ಕೋಳಿಯನ್ನು ಬಾಯಲ್ಲಿಯೇ ಸಿಗಿದು ರಕ್ತದ ಅಭಿಷೇಕ ಮಾಡಿದರು. ಮಣ್ಣಿನಿಂದ ನಿರ್ಮಿಸಿದ ಮೂರ್ತಿಯ ಮೇಲೆ ಕೇಕೆ ಹಾಕಿ ಹೂಂಕರಿಸುತ್ತಿದ್ದ ಅವರನ್ನು ಕಂಡ ಜನರು ಕೈಮುಗಿದರು. ಭೀತಿ ಮತ್ತು ಭಕ್ತಿಯಿಂದ ಜನರು ಆರಾಧಿಸಿದರು. ತಮಟೆ ಶಬ್ದಕ್ಕೆ ತಕ್ಕಂತೆ ಕುಣಿಯುತ್ತಿದ್ದ ಅವರು ಸುಮಾರು ಎರಡು ಗಂಟೆ ಕಾಲ ಪ್ರದರ್ಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.