ADVERTISEMENT

ಗಾಂಜಾ ಮಾರಾಟ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:52 IST
Last Updated 4 ಸೆಪ್ಟೆಂಬರ್ 2024, 13:52 IST
<div class="paragraphs"><p>ಬಂಧನ ( ಸಾಂಕೇತಿಕ ಚಿತ್ರ)</p></div>

ಬಂಧನ ( ಸಾಂಕೇತಿಕ ಚಿತ್ರ)

   

ಕೆಜಿಎಫ್‌: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳವಾರ ಬಂಧಿಸಿರುವ ಸಿಇಎನ್ ಪೊಲೀಸರು, ಆರೋಪಿಯ ಬಳಿ ಇದ್ದ ₹85 ಸಾವಿರ ಮೌಲ್ಯದ 1.5 ಕೆ.ಜಿ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 

ಮಾಲೂರು ತಾಲ್ಲೂಕಿನ ನಿವಾಸಿ ಯಾರಬ್ ಬಂಧಿತ ಆರೋಪಿ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಉಕ್ಕುಂದ ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ. ಗಾಂಜಾ ಜೊತೆಗೆ ಟೆಂಪೊವನ್ನೂ ಸಹ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸಿಇಎನ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ, ಸಬ್ ಇನ್‌ಸ್ಪೆಕ್ಟರ್ ಪರಿಮಳ, ಸಿಬ್ಬಂದಿ ರಘುನಾಥ್, ಎಂ.ವಿ. ರಮೇಶ್, ಚೇತನ್‌ಕುಮಾರ್, ಚೇತನ್ ಯಾದವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.